ಸುಳ್ಳುಗಳ ಹೊರತಾಗಿ ನಿಮ್ಮ ರಾಜಕೀಯ ನಡೆಯುವುದಿಲ್ಲವೇ..? ಸಿದ್ಧರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಕಿಡಿ.

ಬೆಂಗಳೂರು,ಮಾರ್ಚ್,25,2022(www.justkannada.in):  ಮುಸ್ಲಿಂ ಹೆಣ್ಣು ಮಕ್ಕಳು ದುಪ್ಪಟ ಹಾಕಿಕೊಂಡರೇ ತೊಂದರೆ ಏನು..?  ಹಿಂದೂ ಹೆಣ್ಣು ಮಕ್ಕಳು ತಲೆಗೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ..? ಸ್ವಾಮೀಜಿಗಳೂ ಸಹ ತಲೆ ಮೇಲೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸುಳ್ಳುಗಳ ಹೊರತಾಗಿ ನಿಮ್ಮ ರಾಜಕೀಯ ನಡೆಯುವುದಿಲ್ಲವೇ..? ‘ಹಿಜಾಬ್ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು. ಕೋರ್ಟ್ ಇವರ ಹೇಳಿಕೆಗೆ ವಿರುದ್ಧವಾಗಿ ತೀರ್ಪು ನೀಡಿತು. ರಾಷ್ಟ್ರಧ್ವಜವೇ ಇರದ ಸ್ತಂಭದಲ್ಲಿ ರಾಷ್ಟ್ರಧ್ವಜ ತೆಗೆದಿದ್ದಾರೆ ಎಂದರು. ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿದ್ದಾಗಿ ಸುಳ್ಳು ಹೇಳಿದರು’ ಎಂದು ಬಿಜೆಪಿ  ಆರೋಪಿಸಿದ್ದು ಬುರುಡೆರಾಮಯ್ಯ ಎಂದು ಕುಟುಕಿದೆ.

ಓಲೈಕೆಗೂ ಒಂದು ಮಿತಿ ಇರುತ್ತದೆ, ಅದನ್ನೂ ನೀವು ದಾಟಿದ್ದೀರಿ. ಮೊದಲು ಹಿಜಾಬ್, ದುಪಟ್ಟಾ, ಪೇಟ ಬಗ್ಗೆ ವ್ಯತ್ಯಾಸ ತಿಳಿಯಿರಿ. ಹಿಜಾಬ್ ನಿಷೇಧಿಸಿಲ್ಲ, ತರಗತಿಗೆ ಮಾತ್ರ ಅನುಮತಿ ನೀಡಿಲ್ಲವಷ್ಟೇ. ಹಿಜಾಬ್ ವಿಚಾರವಾಗಿ ಸಿದ್ದರಾಮಯ್ಯಗೆ ಗೊಂದಲವಿದೆ.ಎಂದು ಬಿಜೆಪಿ  ಟಾಂಗ್ ನೀಡಿದೆ.

Key words: bjp- former CM- Siddaramaiah-hijab