ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ- ಮುನಿರತ್ನ ವಿರುದ್ಧ ಮಾಜಿ ಸಂಸದ ಆರ್.ಧೃವನಾರಾಯಣ್ ಕಿಡಿ..

Promotion

ಬೆಂಗಳೂರು,ಅಕ್ಟೋಬರ್,23,2020(www.justkannada.in):  ಆರ್.ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಕಿಡಿಕಾರಿದರು.jk-logo-justkannada-logo

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಆರ್.ಧೃವನಾರಾಯಣ್, ವೇಲು ನಾಯಕ್ ರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಹಲ್ಲೆ ಮಾಡುವಾಗ ವಿಡಿಯೋ ಮಾಡಲು ಬಿಡಲಿಲ್ಲ. ಮುನಿರತ್ನ ಅವರು ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಾವು ವೋಟರ್ ಐಡಿ ಕಲೆಕ್ಟ್ ಮಾಡಿಲ್ಲ. ನೀವು ವೋಟರ್ ಐಡಿ ಕಲೆಕ್ಟ್ ಮಾಡಿ ಗೆದ್ಧಿದ್ದೀರಿ ಎಂದು ವಾಗ್ದಾಳಿ ನಡೆಸಿದರು.not-morality-talking-about-our-party-former-mp-r-druvanarayan-against-muniratna

ಆರ್.ಆರ್ ನಗರ ಬಳ್ಳಾರಿಯಾಗುತ್ತಿದೆ ಎಂದು ಹೇಳಿದ್ದೀರಿ. ಇದು ಬಳ್ಳಾರಿ ಜನತೆಗೆ ಮಾಡಿದ ಅಪಮಾನ ಎಂದು ಆರ್.ಧೃವನಾರಾಯಣ್ ಕಿಡಿಕಾರಿದರು.

Key words: not-morality -talking -about -our party-Former MP -R. Druvanarayan – against Muniratna