ಲೋಕಸಮರ: ರಾಜ್ಯದಲ್ಲಿ 2ನೇ ಹಂತದ ಮತದಾನ ಮುಕ್ತಾಯ: ಸಂಜೆ ವೇಳೆಗೆ ಶೇ 66.05ರಷ್ಟು ವೋಟಿಂಗ್.

ಬೆಳಗಾವಿ/ಶಿವಮೊಗ್ಗ,ಮೇ,7,2024 (www.justkannada.in):  ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ನಡೆದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ.

ಇಂದು  ಬೆಳಗ್ಗೆ 07ಗಂಟೆಯಿಂದ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು,  ಸಂಜೆ 5ಗಂಟೆವರೆಗೆ ಶೇ 66.05ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿಕ್ಕೋಡಿ 72.75%, ಬೆಳಗಾವಿ 65.67%, ಶಿವಮೊಗ್ಗ 72.07%, ರಾಯಚೂರು 59.48%, ಬೀದರ್ 60.17%, ಕಲಬುರಗಿ 57.20%, ಕೊಪ್ಪಳ 66.05%, ವಿಜಯಪುರ 60.95%, ಬಾಗಲಕೋಟೆ 65.55%, ಬಳ್ಳಾರಿ 68.94%, ಹಾವೇರಿ 71.90%, ಉತ್ತರ ಕನ್ನಡ 69.75%, ದಾವಣಗೆರೆ 70.90%, ಧಾರವಾಡ ಕ್ಷೇತ್ರದಲ್ಲಿ ಶೇ.67.15ರಷ್ಟು ಮತದಾನವಾಗಿದೆ.

28 ಕ್ಷೇತ್ರಗಳ ಪೈಕಿ ಏಪ್ರಿಲ್ 26 ರಂದು ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು 2ನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ವೋಟಿಂಗ್ ನಡೆದಿದ್ದು ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ.

Key words: Lokasaba, election, state,voting, ends