ಮೈಸೂರಿನ ಪಾರಂಪರಿಕ ಲ್ಯಾನ್ಸ್ ಸ್ಟೋನ್ ಬಿಲ್ಡಿಂಗ್ ಕುಸಿದು ಬಿದ್ದು ಇಂದಿಗೆ 10 ವರ್ಷ.

ಮೈಸೂರು,ಆಗಸ್ಟ್,25,2022(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡ ಲ್ಯಾನ್ಸ್ ಸ್ಟೋನ್ ಬಿಲ್ಡಿಂಗ್ ಬಿದ್ದು ಇಂದಿಗೆ 10 ವರ್ಷವಾಗಿದೆ.

ಹೌದು ಲ್ಯಾನ್ಸ್ ಸ್ಟೋನ್  ಕಟ್ಟಡ  10 ವರ್ಷದ ಹಿಂದೆ  ಇದೇ ದಿನ ಸಂಜೆ 6 ಗಂಟೆಗೆ ಕುಸಿದು ಬಿದ್ದಿತ್ತು. ಈ ವೇಳೆ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜ್ಞಾನ ಪ್ರಕಾಶ್, ಆನಂದ, ಅನ್ನಪೂರ್ಣ ಹಾಗೂ ಗ್ರಾಹಕ ಆಟೋ ಡ್ರೈವರ್ ಲೋಕೇಶ್  ಅವರು ಮೃತಪಟ್ಟಿದ್ದರು.

ಈ ನಡುವೆ ಕಳೆದ ಹತ್ತು ವರ್ಷಗಳಿಂದಲೂ ಸಹ ಸರ್ಕಾರಗಳು ಬದಲಾದರೂ ಲ್ಯಾನ್ಸ್ ಸ್ಟೋನ್ ಬಿಲ್ಡಿಂಗ್ ಕಾಯಕಲ್ಪಕ್ಕೆ ಯಾವುದೇ ರೀತಿಯ ಮನ್ನಣೆ ಸಿಗಲಿಲ್ಲ.  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪಾರಂಪರಿಕ ಕಟ್ಟಡ ಉಳಿವಿಗೆ ಹಣ ನೀಡಿದ್ದರು.  ಆದರೆ ಸ್ವಲ್ಪ ಕೆಲಸ ಮಾಡಿ ನಂತರ ಕಟ್ಟಡ ಬೀಳಿಸಿ ಮತ್ತೆ ಮರು ನಿರ್ಮಾಣ ಮಾಡಬೇಕೆಂಬ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಅದು ಹಾಗೆ ಉಳಿದಿದೆ.

-ಜಯಂತ್

Key words: 10 years -since – collapse – heritage- Lance down -Building -Mysore.