ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕ ಮರು ಪರಿಷ್ಕರಣೆ ಇಲ್ಲ- ರೋಹಿತ್ ಚಕ್ರತೀರ್ಥ

ಬೆಂಗಳೂರು,ಮೇ,26,2022(www.justkannada.in): ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾದ ಬೆನ್ನಲ್ಲೆ ಸಾಕಷ್ಟು ವಿವಾದ ಉಂಟಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕ ಮರುಪರಿಷ್ಕರಣೆ ಇಲ್ಲ ಎಂದಿದ್ದಾರೆ.

ಸರ್ಕಾರ ಒಂದು ಗಟ್ಟಿನಿರ್ಧಾರ ಮಾಡಿದೆ. ಈ ವರ್ಷ ಪರಿಷ್ಕೃತ ಪಠ್ಯ ಪುಸ್ತಕ ಶಾಲೆಗಳಿಗೆ ತಲುಪಿದೆ.  ಯಾವುದೇ ಕಾರಣಕ್ಕೂ ಮರು ಪರಿಷ್ಕರಣೆ ಇಲ್ಲ. ಸರ್ಕಾರ ಶಿಕ್ಷಣ ಇಲಾಖೆ ಹಿಂದೆ ಸರಿಯುವ ಮಾತೇ ಇಲ್ಲ ಎಂದು ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ.

ಪಠ್ಯದಲ್ಲಿ ಹೆಡ್ಗೆವಾರ್ ಭಾಷಣ ಸೇರಿಸಿದ ಹಿನ್ನೆಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಸೇರಿ ಸಾಹಿತಿಗಳು ಇದಕ್ಕೆ  ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಟಿಪ್ಪು ಪಠ್ಯ ಹಾಗೂ ಭಗತ್ ಸಿಂಗ್ ಅವರ ಪಠ್ಯವನ್ನೂ ಕೈಬಿಡಲಾಗಿದ್ದು ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ ಪಠ್ಯ ಪುಸ್ತಕ ಮರುಪರಿಷ್ಕರಣೆಗೆ ಒತ್ತಾಯಿಸಿದ್ದರು.

Key words: no –textbook- revision – reason-Rohit Chakrathirtha