ಮೈಸೂರಿನಲ್ಲಿ ಮತ್ತೆ ಮೂರು ಡೆಲ್ಟಾ ಪ್ಲಸ್ ಕೇಸ್ ಗಳು ಪತ್ತೆ.

ಮೈಸೂರು,ಜೂನ್,24,2021(www.justkannada.in):  ಕೊರೊನಾ , ಬ್ಲಾಕ್ ಫಂಗಸ್ ಬಳಿಕ ಇದೀಗ ಡೆಲ್ಟಾ ಪ್ಲಸ್ ವೈರಸ್ ಲಗ್ಗೆ ಇಟ್ಟಿದ್ದು ಜನರಲ್ಲಿ ಆತಂಕ ಸೃಷ್ಠಿ ಮಾಡಿದೆ. ಈ ಮಧ್ಯೆ ಮೈಸೂರಿನಲ್ಲಿ ಮತ್ತೆ ಮೂರು ಡೆಲ್ಟಾ ಪ್ಲಸ್ ಕೇಸ್ ಗಳು ಪತ್ತೆಯಾಗಿದ್ದು ಭೀತಿ ಹುಟ್ಟಿಸಿದೆ.jk

ನಿನ್ನೆ ಮೈಸೂರಿನಲ್ಲಿ ಒಂದು ಡೆಲ್ಟಾ ಪ್ಲಸ್ ವೈರಸ್ ಕೇಸ್ ಪತ್ತೆಯಾಗಿತ್ತು ಎನ್ನಲಾಗಿತ್ತು. ಇದೀಗ ಮತ್ತೆ ಮೂರು ಡೆಲ್ಟಾ ಪ್ಲಸ್ ಕೇಸ್ ಪತ್ತೆಯಾಗಿದ್ದು, ಮೈಸೂರು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ನಿನ್ನೆ ಸಂಜೆ ಮೂರು ಕೇಸ್‌ಗಳು ದೃಢಪಟ್ಟಿದ್ದು ಈ ಬಗ್ಗೆ ಬೆಂಗಳೂರಿನ ನಿಮ್ಹಾನ್ಸ್  ಪ್ರಯೋಗಾಲಯದಿಂದ ಮಾಹಿತಿ ಲಭ್ಯವಾಗಿದೆ.

ಈ ಮೂಲಕ ಮೈಸೂರಿನಲ್ಲಿ ಒಟ್ಟು ನಾಲ್ಕು ಡೆಲ್ಟಾ ಪ್ಲಸ್ ಕೇಸ್ ಗಳಿವೆ. ನಿನ್ನೆ ಪತ್ತೆಯಾದ ಮೂರೂ ಕೇಸ್ ಗಳ ವ್ಯಕ್ತಿಗಳು ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಮೇ 6ರಂದು ಶಂಕಿತಗೊಂಡಿದ್ದ  ಕೇಸ್‌ಗಳು.  ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆಂದು ಆರೋಗ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ENGLISH SUMMARY….

Three more Delta Plus cases reported in Mysuru
Mysuru, June 24, 2021 (www.justkannada.in): After Coronavirus and black fungus, now Delta Plus virus has created panic among the people. Meanwhile, three more Delta Plus virus cases have been reported in Mysuru causing alarm.
It can be recalled here that one case of Delta Plus virus was reported in Mysuru yesterday. Three more cases have been reported today posing a challenge to the District Administration. All the three new cases were confirmed yesterday evening according to the reports provided by the NIMHANS Laboratory, Bengaluru.
The total number of Delta Plus cases has increased to four in Mysuru now. Three suspected cases were on May 6. However, all three patients have recovered completely. They have already been discharged, as per sources.
Keyword: Mysuru/ Delta Plus virus/ three new cases/ Total four

Key words: Three -Delta Plus- cases – discovered – Mysore.