ಸುಪ್ರೀಂಕೋರ್ಟ್‌ ನ ಹಿರಿಯ ವಕೀಲ  ಫಾಲಿ ಎಸ್. ನಾರಿಮನ್ ನಿಧನ.

 

ನವದೆಹಲಿ,ಫೆಬ್ರವರಿ,21,2024(www.justkannada.in): ಸುಪ್ರೀಂಕೋರ್ಟ್‌ ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್(95) ನಿಧನರಾಗಿದ್ದಾರೆ.

ನಿನ್ನೆ ರಾತ್ರಿ ದೆಹಲಿಯಲ್ಲಿ ಫಾಲಿ ಎಸ್. ನಾರಿಮನ್ ಕೊನೆಯುಸಿರೆಳೆದಿದ್ದಾರೆ. ನಾರಿಮನ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.  ನಾರಿಮನ್ ಅವರು ಕಾವೇರಿ ನೀರಿನ ವಿಚಾರದಲ್ಲಿ ನಾರಿಮನ್​ ಅವರು ಕರ್ನಾಟಕ ಪರ ವಾದ ಮಂಡಿಸಿದ್ದರು.

ಅವರು 1971 ರಿಂದ ಸುಪ್ರೀಂ ಕೋರ್ಟ್ ವಕೀಲರಾಗಿದ್ದರು. ಅವರು 1972-75ರ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು. ದೇಶವು ಅವರಿಗೆ 1991 ರಲ್ಲಿ ಪದ್ಮಭೂಷಣ ಮತ್ತು 2007ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಿದೆ. ಅವರು 1999-2005ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಭಾರತೀಯ ವಕೀಲರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Key words: Supreme Court- Senior Advocate- Fali S. Nariman- passed away