ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ: ದಂಪತಿಗಳಿಬ್ಬರು ಅರೆಸ್ಟ್.

ಬೆಂಗಳೂರು, ಫೆಬ್ರವರಿ,21,2024(www.justkannada.in):  ನಿರುದ್ಯೋಗಿ‌ ಯುವಕರಿಗೆ ಉದ್ಯೋಗ ಕೊಡಿಸೋದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದ ದಂಪತಿಯನ್ನು ನಗರದ  ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್ ಹಾಗೂ ಮಧು ಪ್ರಕಾಶ್ ಬಂಧಿತ ಆರೋಪಿಗಳು. ಪ್ರಕಾಶ್ ಹಾಗೂ ಮಧು  ಇಬ್ಬರು  ಕೆಲಸಕ್ಕಾಗಿ ಅಲೆಯುವ ಯುವಕರನ್ನು ಟಾರ್ಗೆಟ್ ಮಾಡಿ ಸರ್ಕಾರಿ ನೌಕರಿ ಕೊಡಿಸೋದಾಗಿ ಹೇಳಿ ವಂಚಿಸುತ್ತಿದ್ದರು. 6 ಲಕ್ಷ ಹಣ ಪಡೆದು ಕೆಲಸ ಕೊಡಿಸದೇ ಕಳ್ಳಾಟ ಆಡ್ತಿದ್ದರು. ಸದ್ಯ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 2 ಲಕ್ಷ ನಗದು ಹಣ, 4 ಫೋನ್, ಒಂದು‌ ದ್ವಿಚಕ್ರ ವಾಹನ, 6 ಬ್ಯಾಂಕ್ ಅಕೌಂಟ್ ಗೆ ಸೇರಿದಂತೆ 16 ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ.

Key words: Govt- job –scam- Couple -arrested.