ನಾಳೆ ಮೈಸೂರಿನ ಐಶ್(AIISH)ನಲ್ಲಿ ಡಿಜಿಟಲ್ ಶ್ರವಣ ಸಾಧನಗಳ ವಿತರಣೆ ಕಾರ್ಯಕ್ರಮ.

ಮೈಸೂರು,ಫೆಬ್ರವರಿ,21,2024(www.justkannada.in): ಮಾರ್ಚ್3ರ  ವಿಶ್ವ ಶ್ರವಣ ದಿನದ ಅಂಗವಾಗಿ ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಡಿಜಿಟಲ್ ಶ್ರವಣ ಸಾಧನಗಳನ್ನು ವಿತರಿಸುವ ಕಾರ್ಯಕ್ರಮವನ್ನು ಮೈಸೂರಿನ ಅಖಿಲ ಭಾರತ ಮತ್ತು ವಾಕ್ ಶ್ರವಣ ಸಂಸ್ಥೆಯಲ್ಲಿ ನಾಳೆ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಕಂಟ್ರಿ ಹೆಡ್ ಫ್ರೌಷರ್‍ಗ್ರೂಪ್ಸ್ ನ ಅಲೋಕ್ ಸಿನ್ಹಾ ಇವರು ಆಗಮಿಸಲಿದ್ದಾರೆ.  ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಂ.ಪುಷ್ಪಾವತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮವು ಶ್ರವಣ ಶಕ್ತಿಯ ಸಂರಕ್ಷಣೆ ಮತ್ತುಆರಂಭಿಕ ಶೀಘ್ರ ಚಿಕಿತ್ಸೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. “ಸೂಕ್ತ ಚಿಕಿತ್ಸೆಒದಗಿಸುವುದರ ಜೊತೆ-ಜೊತೆಗೆ ಶ್ರವಣ ಸಾಧನಗಳನ್ನು ನೀಡುವ ಮೂಲಕ ಕೇವಲ ಅವರ ಶ್ರವಣಶಕ್ತಿಯನ್ನು ಬಹುತೇಕ ಯಥಾಸ್ಥಿತಿಗೆ ತರುವುದು ಮಾತ್ರವಲ್ಲದೆ, ಸಂವಹನ ನಡೆಸುವ ಹಾಗೂ ಸಮಾಜದಲ್ಲಿ ತೊಡಗಿಸಿಕೊಳ್ಳುವ ಅವರ ಸಾಮರ್ಥ್ಯವನ್ನು ಸುಧಾರಿಸುತ್ತದೆ.

ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯು, ವೀಲ್‍ ಡಿಟೆಕ್ಷನ್‍ ಅಂಡ್‍ ಆಸ್ಲ್ಲೆ ಕೌಂಟಿಂಗ್ ನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮೈಸೂರಿನ ಹೆಬ್ಬಾಳದ, ಫ್ರೌಶರ್ ಸೆನ್ಸಾರ್‍ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ ಕಂಪನಿಯ ಸಹಭಾಗಿತ್ವದಲ್ಲಿ ಶ್ರವಣದೋಷವುಳ್ಳ ಮಕ್ಕಳು ಮತ್ತು ಹಿರಿಯರಿಗೆ ಶ್ರವಣ ಸಾಧನಗಳನ್ನು ಪ್ರಾಯೋಜಿಸುತ್ತಿದೆ.

Key words: Digital hearing aids -distribution -program – AIISH- Mysore -tomorrow