Thursday, August 13, 2026

BDA Apartments

Home Front Page ಪಿಂಜ್ರಪೋಲ್ ಮಂತ್ರಿಗಳೆಲ್ಲ ಹಣಕಾಸು ಸಚಿವರಾದ್ರೆ… ! ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಂಸದ ಶ್ರೀನಿವಾಸ...

ಪಿಂಜ್ರಪೋಲ್ ಮಂತ್ರಿಗಳೆಲ್ಲ ಹಣಕಾಸು ಸಚಿವರಾದ್ರೆ… ! ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಂಸದ ಶ್ರೀನಿವಾಸ ಪ್ರಸಾದ್ 

ಮೈಸೂರು, ನವೆಂಬರ್ 03, 2020 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಬಂಧಿಸಿದಂತೆ ಟೀಕಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಬೇರೆ ಕೆಲಸವಿಲ್ಲ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇಡೀ ಜಗತ್ತು ತಲ್ಲಣಗೊಂಡಿದೆ. ಆದರೆ ಇದು ಸಿದ್ದರಾಮಯ್ಯ ಅವರಿಗೆ ಅರ್ಥವಾಗುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರವೂ ಆರ್ಥಿಕ ಪರಿಸ್ಥಿತಿಯೂ ಸಂಕಷ್ಟದಲ್ಲಿದೆ. ಇಡೀ ಜಗತ್ತೇ ತಲ್ಲಣಗೊಂಡಿದೆ. ಇದಕ್ಕೆ ನಮ್ಮ ರಾಜ್ಯದ ಪರಿಸ್ಥಿತಿ ಹೊರತಾಗಿಲ್ಲ. ರಾಜ್ಯದ ಹಣಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ಸಿದ್ದರಾಮಯ್ಯ ಅವರಿಗೆ ಇದು ಅರ್ಥವಾಗುತ್ತಿಲ್ಲವೇ? ಪಿಂಜ್ರಪೋಲ್ ಮಂತ್ರಿಗಳೆಲ್ಲ ಹಣಕಾಸು ಮಂತ್ರಿ ಆದ್ರೆ ಹೀಗೆ ಆಗೋದು ಎಂದು ವ್ಯಂಗ್ಯವಾಡಿದ್ದಾರೆ.