ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇಲ್ಲ: ಹಣದ ಕೊರತೆಯೂ ಇಲ್ಲ- ಸಚಿವ ನಾರಾಯಣಗೌಡ…

ಮಂಡ್ಯ, ಜು,18,2020(www.justkannada.in):  ಕೊರೋನಾ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇಲ್ಲ. ಹಣದ ಕೊರತೆಯೂ ಇಲ್ಲ. ಯಾವುದೇ ರೋಗಿಗೂ ಚಿಕಿತ್ಸೆ ನೀಡುವಲ್ಲಿ ಸಮಸ್ಯೆ ಇಲ್ಲ. ಕೊರೋನಾ ನಿಯಂತ್ರಣ ಸಂಬಂಧ ಎಲ್ಲ ಶಾಸಕರು ಸಹಕಾರ ನೀಡಬೇಕು ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದರು.

ಮಂಡ್ಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೊವಿಡ್ – 19 ನಿಯಂತ್ರಿಸುವ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದ ಬಳಿಕ ಸಚಿವ ನಾರಾಯಣ ಗೌಡ  ಮಾಧ್ಯಮದೊಂದಿಗೆ ಮಾತನಾಡಿದರು.jk-logo-justkannada-logo

ಮಂಡ್ಯ ಜಿಲ್ಲೆಯಲ್ಲಿ ಮೊನ್ನೆಯವರೆಗೂ  ಕೊರೋನಾದಿಂದ ಯಾವುದೇ ಸಾವು ಸಂಭವಿಸಿರಲಿಲ್ಲ. ಆದ್ರೆ ಈಗ 6 ಜನ ಮೃತಪಟ್ಟಿದ್ದು  ನೋವಿನ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಕೊವಿಡ್ 19 ನಿಂದ ಮೃತಪಟ್ಟವರಿಗೆ ಹೈಪೊಥೈರಾಯಿಡ್ , ಬಿಪಿ, ಶುಗರ್ , ಶ್ವಾಸಕೋಸದ ಸಮಸ್ಯೆ ಕೂಡ ಇತ್ತು. ಇನ್ನಿಬ್ಬರು ವೆಂಟಿಲೇಟರ್ ನಲ್ಲಿ ಇದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ 35 ಕಡೆಗಳಲ್ಲಿ ಸ್ಥಳ ಗುರುತಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇಲ್ಲ. ಹಣದ ಕೊರತೆಯೂ ಇಲ್ಲ. ಯಾವುದೇ ರೋಗಿಗು ಚಿಕಿತ್ಸೆ ನೀಡುವಲ್ಲಿ ಸಮಸ್ಯೆ ಇಲ್ಲ. ಎಲ್ಲ ಶಾಸಕರು ಸಹಕಾರ ನೀಡಬೇಕು. ಶಾಸಕರುಗಳಿಗೆ ಅಧಿಕಾರಿಗಳು ಎಲ್ಲ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಮೈಶುಗರ್ ಕಾರ್ಖಾನೆ ಆರಂಭ ಕುರಿತು ಪ್ರತಿಕ್ರಿಯಿಸಿದ ಸಚಿವ ನಾರಾಯಣಗೌಡ, ಮೈಶುಗರ್ ಕಾರ್ಖಾನೆ ಅತಿ ಶೀಘ್ರದಲ್ಲಿ ಆರಂಭವಾಗಬೇಕು. ಅದಕ್ಕೆ ಬೇಕಾದ ಸಿದ್ಧತೆ ನಡೆದಿದೆ. ಮಂಗಳವಾರ, ಬುಧವಾರ ಈ ಸಂಬಂಧ ಸಭೆ ಇದೆ. ಬಳಿಕ ಸಿಎಂ ಜೊತೆ ಚರ್ಚಿಸಿ ಕಾರ್ಖಾನೆ ಆರಂಭಿಸುತ್ತೇವೆ. ಕಾರ್ಖಾನೆ ಆರಂಭಿಸಲು ಕಾರ್ಮಿಕರೂ ಸಹಕರಿಸಬೇಕು. ವಿನಾಕಾರಣ ಅಡ್ಡಿಪಡಿಸಿದರೆ ರೈತರಿಗೆ ಸಮಸ್ಯೆ ಆಗುತ್ತೆ ಎಂದರು.no-shortage-beds-hospitals-corona-treatment-minister-narayana-gowda

ಕೆರೆ ಕಾಮೇಗೌಡ ಅವರ ಬಗ್ಗೆಯೂ ಪರ ವಿರೋಧ ಕೇಳಿದ್ದೇನೆ. ಸಧ್ಯದಲ್ಲೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವುದಾಗಿ ಸಚಿವ ನಾರಾಯಣಗೌಡ ಹೇಳಿದರು.

Key words: no shortage – beds – hospitals-corona-treatment- Minister -Narayana Gowda.