ಮೈಸೂರಲ್ಲಿ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆಗೆ ಚಾಲನೆ

 

ಮೈಸೂರು, ಜ.19, 2020 : (www.justkannada.in news) : ಎಸ್ ಜಿ .ಎಸ್. ಅಂತರಾಷ್ಟ್ರೀಯ ಯೋಗ ಪ್ರತಿಷ್ಠಾನ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಕಾಳಿಂಗರಾವ್ ಗಾನ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಂಸ್ಥಾಪಕ ಅಧ್ಯಕ್ಷ ಆಚಾರ್ಯ ಡಾ . ಎಂ . ನಿರಂಜನಮೂರ್ತಿ, ಸಂಸದ ಪ್ರತಾಪ್ ಸಿಂಹ , ಶಾಸಕ ಎಸ್.ಎ.ರಾಮ್ ದಾಸ್, ಭಾಷ್ಯ್ಮ ಸ್ವಾಮೀಜಿ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.

mysore-yoga-competion-prathap-simha-bjp-ramadas

ಬಳಿಕ ಮಾತನಾಡಿದ ಮೊರಾರ್ಜಿ ದೇಸಾಯಿ ಯೋಗ ನಿರ್ದೇಶಕ ಈಶ್ವರ್ ಬಸವರೆಡ್ಡಿ, ಯೋಗ ನಮ್ಮ ಸಂಸ್ಕೃತಿ
ಅನಾದಿಕಾಲದಿಂದಲೂ ನಮ್ಮ ಅನೇಕ ಯೋಗ ಪಟ್ಟುಗಳು ಯೋಗವನ್ನು ಪೋಷಿಸಿಕೊಂಡು ಬಂದಿದ್ದರು. ಈಗ ಅದನ್ನು ನಮ್ಮ ಪ್ರಧಾನ ಮಂತ್ರಿ ದೇಶದ್ಯಾಂತ ತಲುಪಿಸುವ ಕಾರ್ಯ ಮಾಡಿದ್ದಾರೆ, ಅವರಿಗೆ ಧನ್ಯವಾದಗಳು ಎಂದರು.

8 ವರ್ಷದಿಂದ 40 ವರ್ಷ ಮೇಲ್ಪಟ್ಟು ವಯೋಮಾನದವರಿಗೆ ಸುಮಾರು 10 ವಿಭಾಗಗಳಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು. ಅಥ್ಲೆಟಿಕ್ , ಓನ್ ಚಾಯ್ಸ್ ,ಆರ್ಟಸ್ಟ್ರಿಕ್ , ರಿದಮಿಕ್ ಯೋಗಾಸನ ಸ್ಪರ್ಧೆಯ ಜೊತೆ ‘ ಚಾಂಪಿಯನ್ ಆಫ್ ಚಾಂಪಿಯನ್ ‘ ಸ್ಪರ್ಧೆ ನಡೆಸಲಾಯಿತು.

mysore-yoga-competion-prathap-simha-bjp-ramadas

ಈ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರೀಯ ಯೋಗ ಪತಾಂಜಲಿ ಹಾಗೂ ರಾಷ್ಟ್ರೀಯ ಬೆಸ್ಟ್ ಯೋಗ ಮಾಸ್ಟರ್ ಮತ್ತು ರಾಷ್ಟ್ರೀಯ ಯೋಗ ಜೂರಿ ಆವಾರ್ಡ್‌ಗಳನ್ನು ನೀಡಿ ಗೌರವಿಸಲಾಯಿತು

key words : mysore-yoga-competion-prathap-simha-bjp-ramadas