Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಗ್ರಂಥಾಲಯಕ್ಕೆ ಬೆಂಕಿ ಪ್ರಕರಣ: ಸಯ್ಯದ್ ಇಸಾಕ್ ರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದ ಸಚಿವ ಎಸ್.ಟಿ ಸೋಮಶೇಖರ್

ಗ್ರಂಥಾಲಯಕ್ಕೆ ಬೆಂಕಿ ಪ್ರಕರಣ: ಸಯ್ಯದ್ ಇಸಾಕ್ ರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದ ಸಚಿವ ಎಸ್.ಟಿ ಸೋಮಶೇಖರ್

ಮೈಸೂರು,ಏಪ್ರಿಲ್,14,2021(www.justkannada.in): ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ‌ ಬಗ್ಗೆ ತನಿಖೆ ಮಾಡಿ ಕಿಡಿಗೇಡಿಗಳನ್ನು ಬಂಧಿಸಲು ಸೂಚಿಸಿದ್ದೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.CM,B.S.Y,Statement,atrocious,Extreme,Kodihalli Chandrasekhar

ಬಿಜೆಪಿ ಕಚೇರಿಯಲ್ಲಿ  ಸಚಿವ ಸೋಮಶೇಖರ್ ಅವರನ್ನ  ಸೈಯದ್ ಇಸಾಕ್ ಅವರು ಭೇಟಿಯಾಗಿ ಘಟನೆ ವಿವರವನ್ನ ಎಳೆ ಎಳೆಯಾಗಿ ಸಚಿವರ ಮುಂದೆ ಬಿಚ್ಚಿಟ್ಟರು. ಬಳಿಕ ಅದೇ ಸ್ಥಳದಲ್ಲಿ ಗ್ರಂಥಾಲಯ ನಿರ್ಮಿಸಿಕೊಡಿ ಎಂದು ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಸೈಯದ್ ಇಸಾಕ್ ಮನವಿ ಮಾಡಿದರು.library- case - fire - Minister -ST Somashekhar-help- Syed Isaac

ಈ ವೇಳೆ ಸಯ್ಯದ್ ಇಸಾಕ್ ರಿಗೆ  ಸಚಿವ ಎಸ್.ಟಿ ಸೋಮಶೇಖರ್ ವೈಯಕ್ತಿಕವಾಗಿ 25 ಸಾವಿರ ಧನಸಹಾಯ ಮಾಡಿದರು. ಬಳಿಕ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ವಿಚಾರವಾಗಿ ಪೊಲೀಸ್ ಆಯುಕ್ತರ ಬಳಿ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರ‌ಮಕ್ಕೆ ಸೂಚಿಸಿದ್ದೇನೆ ಎಂದು ಹೇಳಿದರು.

Key words: library- case – fire – Minister -ST Somashekhar-help- Syed Isaac