Saturday, October 10, 2026

BDA Apartments

ಕ್ಯಾಪ್ಟನ್ ಕೊಹ್ಲಿ-ಕೋಚ್ ಶಾಸ್ತ್ರಿಗೆ ತರಾಟೆ ತೆಗೆದುಕೊಂಡ ಬಿಸಿಸಿಐ BDA JK_Adv BDA Adv
Home Crime ಹನೂರು ಶೂಟೌಟ್ ಕೇಸ್: ಪ್ರಕರಣ ಸಿಐಡಿಗೆ ವರ್ಗಾವಣೆ

ಹನೂರು ಶೂಟೌಟ್ ಕೇಸ್: ಪ್ರಕರಣ ಸಿಐಡಿಗೆ ವರ್ಗಾವಣೆ

ಚಾಮರಾಜನಗರ,ಆಗಸ್ಟ್,25,2026 (www.justkannada.in):  ಚಾಮರಾಜನಗರ ಹನೂರಿನ ಶಾಡ್ಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡಿಗೆ ಮೂವರು ಬಲಿಯಾದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.

ಹನೂರು ಶೂಟೌಟ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಆದೇಶ ಹೊರಡಿಸಿದ್ದಾರೆ.  ಶೂಟೌಟ್ ಪ್ರಕರಣ ಸಂಬಂಧ 4 ಎಫ್ ಐಆರ್ ದಾಖಲಾಗಿತ್ತು.  ನಾಲ್ಕೂ ಪ್ರಕರಣಗಳನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.ಹನೂರು ಶೂಟೌಟ್ ಕೇಸ್: ಪ್ರಕರಣ ಸಿಐಡಿಗೆ ವರ್ಗಾವಣೆ saleem

ಈ ಸಂಬಂಧ ಚಾಮರಾಜನಗರ ಎಸ್ ಪಿಗೆ ಡಿಜಿ&ಐಜಿಪಿ ಸಲೀಂ ಅವರು ಸೂಚನೆ ನೀಡಿದ್ದಾರೆ.  ಸಿಐಡಿ ವಿಶೇಷ ಘಟಕದಿಂದ ಮುಂದಿನ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.   ಅರಣ್ಯ ಇಲಾಖೆ ಸಿಬ್ಬಂದಿ ಫೈರಿಂಗ್ ಸಂಬಂಧ ರಾಮಪುರಂ ಪೊಲೀಸ್ ಠಾಣೆಯಲ್ಲಿ1 ಹನೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ್ಲಲಿ 1ಕೇಸ್ ದಾಖಲಾಗಿದೆ.ಹನೂರು ಶೂಟೌಟ್ ಕೇಸ್ jk02_new jk02 new

Key words: Hanur Shootout, forest, case,  transferred , CID