ಇಂದು ಅಮಿತ್ ಶಾ ಭೇಟಿ: ನಾಳೆಯೇ ಸಂಪುಟ ವಿಸ್ತರಣೆ ಕ್ಲಿಯರ್- ಸಚಿವಕಾಂಕ್ಷಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಬಿಎಸ್ ಯಡಿಯೂರಪ್ಪ…

ಬೆಂಗಳೂರು,ಜ,30,2020(www.justkannada.in):  99% ನಾಳೆಯೇ ಸಂಪುಟ ವಿಸ್ತರಣೆ ಕ್ಲಿಯರ್ ಆಗುತ್ತದೆ. ಇಂದು ರಾತ್ರಿ ಅಮಿತ್ ಶಾ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿ ನಾಳೆಯೇ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಈ ಮೂಲಕ ಮಂತ್ರಿಗಿರಿಗಾಗಿ ಜಾತಕಪಕ್ಷಿಗಳಂತೆ ಕಾತುಕುಳಿತಿರುವ ಸಚಿವಾಕಾಂಕ್ಷಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಗುಡ್ ನ್ಯೂಸ್ ನೀಡಿದ್ದಾರೆ. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,  ಅಮಿತ್ ಶಾ ಭೇಟಿಗೆ ಸಮಯ ನೀಡಿದ್ದಾರೆ. ರಾತ್ರಿ 10 ಗಂಟೆಗೆ ಅಮಿತ್ ಶಾ ಭೇಟಿ ಮಾಡಿ ಚರ್ಚಿಸುತ್ತೇನೆ. ಅದಕ್ಕೂ ಮುನ್ನ ಜೆಪಿ ನಡ್ಡಾ ಅವರನ್ನ  ಭೇಟಿಯಾಗುತ್ತೇನೆ.  ಇಬ್ಬರೂ ಭೇಟಿಯಾಗಿ ಚರ್ಚೆ ಮಾಡುತ್ತೇನೆ. ನಂತರ ಪ್ರಧಾನಿ ಮೋದಿಯನ್ನೂ ಭೇಟಿಯಾಗುತ್ತಿದ್ದೇನೆ ಎಂದರು.

ವರಿಷ್ಠರ ಭೇಟಿ ಬಳಿಕ ನಾಳೆಯೇ ವಾಪಸ್  ಆಗುತ್ತೇನೆ. ನಾಳೆಯೇ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

Key words: 99% clear – cabinat expansion- tomorrow- CM BS Yeddyurappa- good news