ಕೊರೋನಾ ರೋಗ ನಿಯಂತ್ರಣಕ್ಕೆ ನೈಸರ್ಗಿಕ ಸ್ಯಾನಿಟೈಸರ್: ಮೈಸೂರಿನಲ್ಲಿ ಜಾಗೃತಿ ಅಭಿಯಾನ…

ಮೈಸೂರು,ಜು,21,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ  ವತಿಯಿಂದ ಸರಳ ವಿಧಾನದಿಂದ ಸಾಂಕ್ರಾಮಿಕ ರೋಗ ತಡೆಗಟ್ಟುವ ಸಾಂಸ್ಕೃತಿಕ ಜಾಗೃತಿ ಅಭಿಯಾನ ನಡೆಸಲಾಯಿತು.jk-logo-justkannada-logo

ಹಸುವಿನ ಸಗಣಿ, ಗೋಮೂತ್ರ, ಬೇವಿನ ಸೊಪ್ಪು, ಅಡುಗೆ ಅರಿಶಿನ, ನೀರು ಬಳಸಿ  ತಯಾರು ಮಾಡಿರುವ ನೈಸರ್ಗಿಕ ಸಾನಿಟೈಸರ್ ಅನ್ನ ಕೊರೊನಾ ರೋಗ ನಿಯಂತ್ರಣಕ್ಕೆ ಉಪಯೋಗಿಸುವ ಕುರಿತು  ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಜಾಗೃತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಾಗೃತಿ ಅಭಿಯಾನಕ್ಕೆ ಶಾಸಕ ಎಲ್.ನಾಗೇಂದ್ರ ಹಾಗೂ ಡಿಸಿಪಿ ಪ್ರಕಾಶ್ ಗೌಡ ಚಾಲನೆ ನೀಡಿದರು. ನೆಲಕ್ಕೆ ನೈಸರ್ಗಿಕ ಸ್ಯಾನಿಟೈಸರ್ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ದೊರೆಯಿತು. ಕರಪತ್ರಗಳನ್ನು ಹಂಚುವ ಮೂಲಕ ಪ್ರತೀ ಹಳ್ಳಿ ಹಳ್ಳಿಗಳಲ್ಲಿ  ಈ ಕುರಿತು ಜಾಗೃತಿ ಮೂಡಿಸಲು ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಮುಂದಾಗಿದೆ.

ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಿಸಿಪಿ ಪ್ರಕಾಶ್ ಗೌಡ, ಎನ್.ಆರ್. ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತವಾಗಿ ಜನ ಟೆಸ್ಟ್ ಮಾಡಿಸಿಕೊಳ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಟೆಸ್ಟಿಂಗ್ ಮಾಡುತ್ತಿದ್ದಾರೆ. ಇದರಿಂದ ಸೊಂಕಿನ ಲಕ್ಷಣ ಇರುವವರನ್ನ ಪತ್ತೆ ಹಚ್ಚಲು ಸಹಕಾರಿಯಾಗ್ತಿದೆ. ಈಗಾಗಲೇ ಹಲವು ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಬೇರೆಯವರಿಗೆ ಸೊಂಕು ಹರಡುವುದನ್ನ ತಡೆಗಟ್ಟಲು ಇದು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲೂ ನಮ್ಮ ಇಲಾಖೆ ಸಹಕಾರದೊಂದಿಗೆ ಹೆಚ್ಚಿನ ಟೆಸ್ಟಿಂಗ್ ಕಾರ್ಯ ಮುಂದುವರೆಸಲಾಗುವುದು ಎಂದು ಹೇಳಿದರು.

ಕಂಟೈನ್ಮೆಂಟ್ ಝೋನ್ ನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ಪ್ರಕಾಶ್ ಗೌಡ, ಕಂಟೈನ್ಮೆಂಟ್ ಝೋನ್ ನಲ್ಲಿ ಸಿಬ್ಬಂದಿ ಕೊರತೆ ಇಲ್ಲ. ನಮ್ಮಲ್ಲಿ‌ ಸಾಕಷ್ಟು ಸಿಬ್ಬಂದಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಅಂತಹ ಪರಿಸ್ಥಿತಿ ಕಂಡು ಬಂದಲ್ಲಿ ಸ್ವಯಂ ಸೇವಕರನ್ನ ತೆಗೆದುಕೊಳ್ಳೋ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Key words:  natural sanitizer – corona –disease- control-Awareness- Campaign – Mysore.