Friday, September 11, 2026

BDA Apartments

Home Crime ದೊಡ್ಡ ತಲೆನೋವಾಗಿದ್ದ  ಬೈಕ್ ಕಳ್ಳರನ್ನ ಹೆಡೆಮುರಿ ಕಟ್ಟಿದ ಮೈಸೂರು ಪೊಲೀಸರು.

ದೊಡ್ಡ ತಲೆನೋವಾಗಿದ್ದ  ಬೈಕ್ ಕಳ್ಳರನ್ನ ಹೆಡೆಮುರಿ ಕಟ್ಟಿದ ಮೈಸೂರು ಪೊಲೀಸರು.

ಮೈಸೂರು,ಆಗಸ್ಟ್,13,2021(www.justkannada.in):  ಮೈಸೂರು ನಗರದಲ್ಲಿ ದೊಡ್ಡ ತಲೆನೋವಾಗಿದ್ಧ ಬೈಕ್ ಕಳ್ಳರನ್ನ ಪೊಲೀಸರು ಹೆಡೆಮುರಿ ಕಟ್ಟಿ ಖದೀಮರ ಬಳಿ ಇದ್ಧ ಬೈಕ್ ಗಳನ್ನ ವಶಕ್ಕೆ ಪಡೆದಿದ್ದಾರೆ.

ತಿಂಗಳ ಅಂತರದಲ್ಲಿ 21 ಬೈಕ್  ಹಾಗೂ ಬೈಕ್ ಕಳ್ಳತನದಲ್ಲಿ ಭಾಗಿಯಾಗಿದ್ಧ  ಆರು  ಮಂದಿಯನ್ನ ಮೈಸೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ನಗರದ ಪಾರ್ಕಿಂಗ್ ಜಾಗದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು. ವಾಹನದಲ್ಲಿ ಕೀ ಬಿಟ್ಟಿರುವ, ಹ್ಯಾಂಡಲ್ ಲಾಕ್ ಇಲ್ಲದಿರುವ ಹಾಗೂ ಡ್ಯೂಪ್ಲಿಕೆಟ್ ಕೀ‌ ಬಳಸಿ‌  ಬೈಕ್ ಗಳನ್ನ ಎಗರಿಸಿ ಪರಾರಿಯಾಗುತ್ತಿದ್ದರು.

ಇದೀಗ ನಗರದಲ್ಲಿ ದರೋಡೆ ಪ್ರಕರಣ ಹೆಚ್ಚಾಗುತ್ತಿರುವ ನಡುವೆ ಬೈಕ್ ಕಳ್ಳರನ್ನು ಹಿಡಿದಿದ್ದು, ಸದ್ಯ ನಗರದ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ಮಾಹಿತಿ ನೀಡಿದ್ದಾರೆ.

Key words: bike- thieves-arrest-Mysore -Police.