ಕುರುಬಾರಹಳ್ಳಿ ಜಮೀನು ವಿವಾದ: ಸರ್ಕಾರದ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ…

ಮೈಸೂರು,ಜು,21,2020(www.justkannada.in): ಕುರುಬಾರಹಳ್ಳಿ ಜಮೀನು ವಿವಾದ ಸಂಬಂಧ, ಇದರ ಮೂಲ ಸಮಸ್ಯೆ ಉಂಟಾಗಿರುವುದು ಬಿಜೆಪಿಯವರಿಂದಲೇ. ಬಿಜೆಪಿ ಈ ಭಾಗದ ನಿವಾಸಿಗಳ ಪರವಾಗಿಲ್ಲ. ಅವರಿಗೆ ಆ ಜಮೀನುಗಳು ಬಿ ಖರಾಬಿನಿಂದ ಹೊರಗಿಡುವುದು ಬೇಕಾಗಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.jk-logo-justkannada-logo

ಕುರುಬಾರಹಳ್ಳಿ ಸರ್ವೆ ನಂ 4, 41 ಮತ್ತು 39 ರ ಜಮೀನಿನ ಕುರಿತು ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ  ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಬಿಜೆಪಿಯವರಿಂದಲೇ ಇದರ ಮೂಲ ಸಮಸ್ಯೆ ಉಂಟಾಗಿದೆ. ಅವರಿಗೆ ಆ ಜಮೀನುಗಳು ಬಿ ಖರಾಬಿನಿಂದ ಹೊರಗಿಡುವುದು ಬೇಕಾಗಿಲ್ಲ.  ಬಿಜೆಪಿಯವರು ಇದನ್ನು ಬಿ ಖರಾಬಿನಿಂದ ಹೊರಗಿಡುವುದರ ಕುರಿತು ಮುಂದಿನ ವಾರ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಿದ್ದಾರೆ. ಸರ್ವೆ ನಂ 4 ರಲ್ಲಿ ಆಗಿರುವ ಬೆಳವಣಿಗೆಗಳಲ್ಲಿ ಬಿಜೆಪಿಯವರ ಯಾವುದೇ ಕೊಡುಗೆಗಳಿಲ್ಲ. ಇಲ್ಲಿಯವರೆಗೂ ನಡೆದಿರುವ ಬೆಳವಣಿಗೆಗಳೆಲ್ಲಾ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವಂತದ್ದು ಎಂದು ಹೇಳಿದರು.kurubarahalli-land-controversy-kpcc-spokesperson-m-laxman-against-government

ಕಳೆದ ವಾರ ಆರ್. ಅಶೋಕ್ ಅವರು ಮೈಸೂರಿಗೆ ಬಂದು ಜನರ ಕಿವಿಗೆ ಹೂ ಮುಡಿಸಿ ಹೋಗಿದ್ದಾರೆ. ಕೇವಲ ನಗರಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಪತ್ರವನ್ನೇ ಆದೇಶ ಪತ್ರವೆಂದು ಬಿಂಬಿಸಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

Key words: Kurubarahalli -Land –Controversy-KPCC- spokesperson -M Laxman – against – government.