ತಾಯಿ ಸ್ಥಾನದಲ್ಲಿರುವ ಸಿಎಂ ಮನೆ ಮಕ್ಕಳಿಗೆ ಅನ್ಯಾಯ ಮಾಡಲ್ಲ -ಸಚಿವ ಸಂಪುಟ ವಿಸ್ತರಣೆ ಕುರಿತು ಶಾಸಕ ರಾಮದಾಸ್ ಪ್ರತಿಕ್ರಿಯೆ…

ಮೈಸೂರು,ಸೆಪ್ಟಂಬರ್,ಸೆಪ್ಟಂಬರ್,18,2020(www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆ ಪುನರಚನೆ ವಿಚಾರ ಚರ್ಚಿಸಲು ದೆಹಲಿಗೆ ತೆರಳಿರುವ  ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಶಾಸಕ ಎಸ್.ಎ ರಾಮದಾಸ್ ತಾಯಿ ಸ್ಥಾನಕ್ಕೆ ಹೋಲಿಕೆ ಮಾಡಿದ್ದಾರೆ.jk-logo-justkannada-logo

ತಾಯಿ ಸ್ಥಾನದಲ್ಲಿರುವ ಸಿಎಂ ಅನ್ಯಾಯ ಮಾಡಲ್ಲ. ಮನೆ ಮಕ್ಕಳಿಗೆ ಅನ್ಯಾಯ ಮಾಡಲ್ಲ. ಮನೆಯವರಿಗೆ ಊಟ ಹಾಕಬೇಕೋ ಅಥವಾ ಅತಿಥಿಗಳಿಗೆ ಊಟ ಹಾಕಬೇಕೋ ಎಂಬುದನ್ನ ತಾಯಿ ನಿರ್ಧರಿಸುತ್ತಾರೆ ಎಂದು ಶಾಸಕ ಎಸ್.ಎ ರಾಮದಾಸ್ ಸಂಪುಟ ವಿಸ್ತರಣೆ ಕುರಿತು ಮಾತುಗಳನ್ನಾಡಿದ್ದಾರೆ.cm-mother-mla-ramdas-cabinet-expansion

ಮಾಧ್ಯಮಗಳ ಜತೆ ಇಂದು ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಕೊಡದಿದ್ದರೂ ಖುಷಿಯಿಂದ ಇರುತ್ತೇನೆ. ಸಿಎಂ  ಬದಲಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

Key words: CM-mother -MLA -Ramdas – Cabinet expansion.