ವಿಪ್ರ ಮಹಿಳೆಯರಿಗೆ ಉಚಿತ ಫೋಟೋ ಶಾಪ್  ಹಾಗೂ ಫೋಟೋ ಆಲ್ಬಮ್ ಡಿಸೈನಿಂಗ್ ತರಬೇತಿ ಕಾರ್ಯಾಗಾರ ಉದ್ಘಾಟನೆ.

ಮೈಸೂರು,ಜನವರಿ,16,2023(www.justkannada.in): ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಂಗ ಸಂಸ್ಥೆಯಾದ ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್(ರಿ) ಸಹಯೋಗದೊಂದಿಗೆ  ನಗರದ ಬಸವನಗುಡಿಯ ಗಾಯತ್ರಿ ಮಹಾ ಸಭಾ ಸಭಾಂಗಣದಲ್ಲಿ ವಿಪ್ರ ಮಹಿಳೆಯರಿಗೆ   ಉಚಿತ ಫೋಟೋ ಶಾಪ್  ಹಾಗೂ ಫೋಟೋ ಆಲ್ಬಮ್ ಡಿಸೈನಿಂಗ್ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ನೆರವೇರಿತು.

ರಾಜ್ಯಾದ್ಯಂತ ಆಗಮಿಸಿರುವ ವಿಪ್ರ ಮಹಿಳೆಯರಿಗೆ ಮೂರುದಿನದ ಉಚಿತ ಫೋಟೋ ಶಾಪ್ ಹಾಗೂ ಆಲ್ಬಮ್ ಡಿಸೈನಿಂಗ್  ಕಾರ್ಯಾಗಾರ ಇದಾಗಿದ್ದು, ತರಬೇತಿ ಪಡೆದ ಮಹಿಳೆಯರಿಗೆ 15 ರಿಂದ 20 ಸಾವಿರ ರೂಪಾಯಿ ಸಂಬಳವಿರುವ ಉದ್ಯೋಗ ಕೂಡ ಲಭಿಸಲಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ತರಬೇತಿಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹಿರಯಣ್ಣ ಸ್ವಾಮಿ,  AKMMS ಅಧ್ಯಕ್ಷ ಡಾ. ಮುರಳಿಧರ್, ವಿಪ್ರ ಬ್ಯುಸಿನೆಸ್ ಪೋರಂ ಅಧ್ಯಕ್ಷ ಜಯತೀರ್ಥ ಬಸವನಗುಡಿ,  ದಿ ಹೆಲ್ತ್ ಪಾಯಿಂಟ್ ಜಿಮ್ ನ ಬಿಕೆ ಪ್ರಕಾಶ್ ಭಾರದ್ವಾಜ್ , ಅಸೋಸಿಯೇಷನ್ ಅಧ್ಯಕ್ಷ  ರಮೇಶ್ ಬಿ ಕೆ ಉಪಸ್ಥಿತರಿದ್ದರು.

Key words: Inauguration – free- photo shop – photo album –designing- training -workshop -women.