ಬಾಬಾ ಅಣುಸಂಶೋಧನಾ ಕೇಂದ್ರದ ವಿಜ್ಞಾನಿ ನಿಗೂಢ ಕಣ್ಮರೆ…

ಮೈಸೂರು,ಅಕ್ಟೋಬರ್,10,2020(www.justkannada.in): ನಗರದ  ಬಾಬಾ ಅಣುಸಂಶೋಧನಾ ಕೇಂದ್ರ(ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್)ದ ಯುವ ವಿಜ್ಞಾನಿ ಅಭಿಷೇಕ್ ರೆಡ್ಡಿ ಗುಲ್ಲಾ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.jk-logo-justkannada-logo

ಮೈಸೂರಿನ ಹೊರವಲಯ ಇಲವಾಲ ನಿವಾಸಿಯಾಗಿರುವ ಅಭಿಷೇಕ್  ಆರ್ ಎಂಪಿಯಲ್ಲಿ ವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿದ್ರು. ಅಕ್ಟೋಬರ್ 6ರ ಮಧ್ಯಾಹ್ನದಿಂದ ಇವರು ಕಣ್ಮರೆಯಾಗಿದ್ದಾರೆ. ಅಭಿಷೇಕ್ ಜತೆ ಬ್ಲಾಕ್ ಆಕ್ಟಿವಾ(KA 09 JA 0013) ವಾಹನವೂ ನಾಪತ್ತೆಯಾಗಿದೆ.mysterious-missing-baba-nuclear-center-scientist-mysore

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಆದರೂ ಈ ತನಕ ಅಭಿಷೇಕ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಅಭಿಷೇಕ್ ರೆಡ್ಡಿ ಗುಲ್ಲಾ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಆತಂಕಕ್ಕೆ ಒಳಗಾಗಿದ್ದಾರೆ.

Key words:  mysterious -missing-Baba Nuclear Center –scientist-mysore