Sunday, September 20, 2026

BDA Apartments

Home Front Page ವಿಧಾನಸೌಧದ ಗೋಡೆಯಲ್ಲಿ ಕಾಸಿಲ್ಲದೆ ಏನು ನಡೆಯಲ್ಲ: ಹಣ ಪತ್ತೆ ಬಗ್ಗೆ ಡಿಕೆ ಶಿವಕುಮಾರ್ ವ್ಯಂಗ್ಯ.

ವಿಧಾನಸೌಧದ ಗೋಡೆಯಲ್ಲಿ ಕಾಸಿಲ್ಲದೆ ಏನು ನಡೆಯಲ್ಲ: ಹಣ ಪತ್ತೆ ಬಗ್ಗೆ ಡಿಕೆ ಶಿವಕುಮಾರ್ ವ್ಯಂಗ್ಯ.

ಬೆಂಗಳೂರು,ಜನವರಿ,5,2023(www.justkannada.in): ವಿಧಾನಸೌಧದಲ್ಲಿ ಅನಧಿಕೃತವಾಗಿ 10 ಲಕ್ಷ ರೂ. ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸೌಧದ ಗೋಡೆಯಲ್ಲಿ ಕಾಸಿಲ್ಲದೆ ಏನು ನಡೆಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಮಂತ್ರಿಗಳ ಮನೆಯಿಂದ ಫೋನ್ ಬಂದಿದೆ. ಫೋನ್ ಬಂದ ಬಳಿಕ ಹಣವನ್ನ ತಂದು ಬಿಟ್ಟಿದ್ದಾರೆ. ಅನೇಕ ಘಟನೆಗಳ ಮಾಹಿತಿ ನಮಗೆ ಬರುತ್ತದೆ. ಇನ್ನು 60 ದಿನ ಮಾತ್ರ ಸರ್ಕಾರ ಇರಲಿದೆ. ಏನ್ ಸಾಧನೆ ಮಾಡುತ್ತಾರೆ ನೋಡೋಣ.  40 ಕಮಿಷನ್ ಗೆ  ದುಡ್ಡು ದಾಖಲೆ ಅಲ್ವೇನ್ರಿ..?  ಎಂದು ಪ್ರಶ್ನಿಸಿದರು.ವಿಧಾನಸೌಧದ ಗೋಡೆಯಲ್ಲಿ ಕಾಸಿಲ್ಲದೆ ಏನು ನಡೆಯಲ್ಲ dks

ವಿಧಾನ ಸೌಧದಲ್ಲಿರುವ ಪ್ರತಿ ಕಚೇರಿಯಲ್ಲಿ ಕಮೀಶನ್ ವ್ಯವಾಹಾರ ನಡೆಯುತ್ತಿದೆ, ಸಾಧ್ಯವಿದ್ದಷ್ಟು ಹಣ ದೋಚಿಕೊಳ್ಳುವ ಹುನ್ನಾರ ಮಂತ್ರಿಗಳದ್ದು. ಹಣದ ಜೊತೆ ಸಿಕ್ಕ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸರು ಯಾವುದೋ ಸಚಿವರ ಫೋನ್ ಬಂದ ಕೂಡಲೇ ಬಿಟ್ಟು ಕಳಸಿದರಂತೆ ಎಂದು ಡಿ.ಕೆ ಶಿವಕುಮಾರ್ ಆರೋಪಿಸಿದರು.

Key words: without -money – no work-vidhanasoudha- DK Shivakumar