ಸಿದ್ದರಾಮಯ್ಯ ವಿರುದ್ಧ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಗುಟ್ಟನ್ನು ಬಹಿರಂಗ ಪಡಿಸಿದ ವಿಜಯೇಂದ್ರ.

 

ಮೈಸೂರು, ಸೆ.09, 2020 : (www.justkannada.in news) : ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ಮೈಸೂರಿನ ವರುಣಾ ಕ್ಷೇತ್ರ ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿತ್ತು. ಕಾರಣ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಜತೆಗೆ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಈ ಕ್ಷೇತ್ರದಿಂದಲೇ ಕಣಕ್ಕಿಳಿಯುವ ಮೂಲಕ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದದ್ದು.

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಅಖಾಡಕ್ಕೆ ಇಳಿಯುವುದು ಬಹುತೇಕ ನಿಶ್ಚಿತ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಪೂರಕವಾಗಿ ಎಂಬಂತೆ ವಿಜಯೇಂದ್ರ ಸಹ ಹಲವು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಕಾರಣವಾಗಿತ್ತು.

mysore-varuna-election-siddaramaiah- vijayendra-bsy-bjp

ಆದರೆ ಬದಲಾದ ಸನ್ನಿವೇಶದಲ್ಲಿ, ಕಡೆ ಗಳಿಗೆಯಲ್ಲಿ ವಿಜಯೇಂದ್ರ ಅಖಾಡದಿಂದ ಹಿಂದೆ ಸರಿಯಬೇಕಾಯಿತು. ಸ್ಪರ್ಧೆಗೆ ಮುಂದಾಗಿದದ್ದು, ಮತ್ತೆ ಹಿಂದೆ ಸರಿದದ್ದು ನಿಗೂಢ. ಅದೇ ರೀತಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರಗೆ ಕ್ಷೇತ್ರ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಬೇಕಾಯಿತು.

ಈ ಘಟನೆಯ ಗುಟ್ಟನ್ನು ಖುದ್ದು ವಿಜಯೇಂದ್ರ ಅವರು ಮೈಸೂರಿನಲ್ಲಿ ಬಹಿರಂಗ ಪಡಿಸಿದ್ದಾರೆ. ನಗರದಲ್ಲಿ ಮಂಗಳವಾರ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ಜತೆ ಮಾತನಾಡಿ ಹೇಳಿದಿಷ್ಟು.
ನಾನು ರಾಜಕೀಯ ಪ್ರವೇಶಿಸಬೇಕು ಎಂದು ಅಂದುಕೊಂಡಿರಲಿಲ್ಲ. ಆದರೆ ವರುಣಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆಂದು ಹೆಚ್ಚು ಸಲ ಓಡಾಡಿದ್ದೆ. ಈ ವೇಳೆ ಪಕ್ಷದ ಬಹುತೇಕ ಕಾರ್ಯಕರ್ತರು, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಲು ಬಿಜೆಪಿಯಿಂದ ನೀವೆ ಕಣಕ್ಕಿಳಿಯಬೇಕು ಎಂಬ ಒತ್ತಡ ಹೇರ ತೊಡಗಿದರು. ಅನಿವಾರ್ಯವಾಗಿ ನಾನು ಈ ಒತ್ತಡಕ್ಕೆ ಮಣಿದು ಕಣಕ್ಕಿಳಿಯಲು ಸಹಮತ ವ್ಯಕ್ತಪಡಿಸಿದೆ.

mysore-varuna-election-siddaramaiah- vijayendra-bsy-bjp

ಈ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿದ್ದದ್ದಿಷ್ಟೆ, ಸಿದ್ದರಾಮಯ್ಯ ಒರ್ವ ಹಿರಿಯ ರಾಜಕಾರಣಿ, ಜತೆಗೆ ಹಾಲಿ ಮುಖ್ಯಮಂತ್ರಿಯಾಗಿದ್ದವರು. ಅಂಥವರ ವಿರುದ್ಧ ಸ್ಪರ್ಧಿಸಿ ಗೆದ್ದರೆ, ಸಿಟ್ಟಿಂಗ್ ಸಿಎಂ ಅನ್ನು ಸೋಲಿಸಿದ ಕೀರ್ತಿ. ಆ ಮೂಲಕ ಹೊಸದೊಂದು ಇತಿಹಾಸ ಸೃಷ್ಠಿ. ಒಂದು ವೇಳೆ ಸೋತರೂ ಅದರಿಂದ ನನಗೇನು ನಷ್ಟವಿಲ್ಲ. ಏಕೆಂದರೆ ಸಿಎಂ ವಿರುದ್ಧ ಸೋತೆ ಎನ್ನುವ ಸಮಧಾನವೇ ಇರುತ್ತಿತ್ತು ಎಂದು ವಿಜಯೇಂದ್ರ ತಮ್ಮ ಸ್ಪರ್ಧೆಯ ಹಿಂದಿನ ಗುಟ್ಟು ಬಹಿರಂಗ ಪಡಿಸಿದರು.

 

key words : mysore-varuna-election-siddaramaiah- vijayendra-bsy-bjp