ಅಣ್ಣಾವ್ರಿಗೆ ‘ಗೌರವ ಡಾಕ್ಟರೇಟ್ ‘ ; ನಾನಾಗ ಪಿಯು ವಿದ್ಯಾರ್ಥಿಯಾಗಿದ್ದೆ. ಅವಿಸ್ಮರಣೀಯ ಘಟನೆ ಮೆಲುಕು ಹಾಕಿದ ಮೈಸೂರು ವಿವಿ ಕುಲಪತಿ.

Promotion

ಮೈಸೂರು, ಫೆ.08, 2021 : (www.justkannada.in news) : 45 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯ, ವರನಟ ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ವಿವಿ ಹಾಲಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಹೇಳಿದಿಷ್ಟು.

mysore-university-doctorate-rajkumar-kannada-actor-UOM

ನಾನಾಗ ಮೈಸೂರಿನ ಶಾರದ ವಿಲಾಸ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದೆ. ಮಾನಸ ಗಂಗೋತ್ರಿಯ ಓಪನ್ ಏರ್ ಥಿಯೇಟರ್ ನಲ್ಲಿ ಘಟಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭ ನಡೆದ ದಿನ ಭಾನುವಾರವಾದ ಕಾರಣ, ನಾನು ಗೆಳೆಯರ ಜತೆಗೂಡಿ ಸಮಾರಂಭ ವೀಕ್ಷಿಸಲು ತೆರಳಿದ್ದೆ. ನಾವಾಗ ಹುಡುಗರಾದ ಕಾರಣ ಪ್ರವೇಶಾವಕಾಶ ಸಿಗಲಿಲ್ಲ. ಆದರೆ, ಮರುದಿನ ಪತ್ರಿಕೆಗಳಲ್ಲಿ ಬಂದ ಕಾರ್ಯಕ್ರಮದ ಸುದ್ದಿಯನ್ನು ಓದಿ, ಅಣ್ಣಾವ್ರ ಫೋಟೋ ನೋಡಿ ಕಣ್ ತುಂಬಿಕೊಂಡೆವು.

mysore-university-yuvaraja-college-convocation-101-vc-hemanth.kumar

ಈಗ ಅದೇ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಕುಲಪತಿಯಾಗಿ, ಹಳೆಯ ಈ ಘಟನೆಯನ್ನು ಮೆಲುಕು ಹಾಕುತ್ತಿರುವುದು ಸಂತಸ ಉಂಟು ಮಾಡಿದೆ. ಕನ್ನಡದ ಸ್ವಾಭಿಮಾನದ ಸಂಕೇತ, ಕನ್ನಡಿಗರ ಸಾಕ್ಷಿಪ್ರಜ್ಞೆ  ಡಾ. ರಾಜ್ ಕುಮಾರ್ , ಅವ್ರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿದ್ದು ಹೆಮ್ಮೆಯ ಸಂಗತಿ. ಅಂಥ ವಿಶ್ವವಿದ್ಯಾನಿಲಯದಲ್ಲಿ ನಾನೀಗ ಕುಲಪತಿಯಾಗಿರುವುದು ಹೆಮ್ಮೆಯನ್ನು ಇಮ್ಮಡಿಗೊಳಿಸುತ್ತದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

 

key words : mysore-university-rajkumar-hemanth-kumar-vc-uom