ಮೈಸೂರಿನಲ್ಲಿ ಜೋಡಿ ಕೊಲೆ ಕೇಸ್: ಇಬ್ಬರು ಆರೋಪಿಗಳ ಬಂಧನ…

ಮೈಸೂರು,ಫೆಬ್ರವರಿ,8,2021(www.justkannada.in):  ನಿನ್ನೆ ತಡರಾತ್ರಿ ಮೈಸೂರಿನಲ್ಲಿ ನಡೆದಿದ್ಧ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.jk

ಮೀಸೆಸ್ವಾಮಿ, ರಘು ಬಂಧಿತ ಆರೋಪಿಗಳು. ಘಟನೆ ಸಂಬಂಧ ಮತ್ತಿಬ್ಬರು ಆರೋಪಿಗಳಾದ ದಿಲೀಪ್ ಹಾಗೂ ರಘು ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.mysore-two-murder- case –two- accused-arrest

ಮೈಸೂರಿನಲ್ಲಿ ಎಲೆ ತೋಟದ ಬಳಿ ಕಿರಣ್  ಮತ್ತು ಕಿಶನ್ ಎಂಬುವವರನ್ನ ನಿನ್ನೆ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ ಗೌರಿಶಂಕರ‌ ನಿವಾಸಕ್ಕೆ ಸಂಬಂಧಿಸಿದ‌ ಗಲಾಟೆ, ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ‌. ಕಿರಣ್, ಆಟೊ‌ಚಾಲಕನಾಗಿದ್ದ. ಕಿಶನ್, ಕಾರ್ ಶೋರಂನಲ್ಲಿ ಕೆಲಸ ಮಾಡುತ್ತಿದ್ದನು. 2016 ರಲ್ಲಿ ಕೆ.ಆರ್.ಠಾಣೆಯಲ್ಲಿ‌ ರೌಡಿ ಶೀಟರ್ ಆಗಿದ್ದನು ಎಂದು ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ತಿಳಿಸಿದ್ದಾರೆ.

Key words: mysore-two-murder- case –two- accused-arrest