ಬೆಲೆ ಏರಿಕೆಗೆ ಖಂಡನೆ: ಕಾಂಗ್ರೆಸ್ ನಿಂದ ಅಣಕು ಶವಯಾತ್ರೆ….

ಮೈಸೂರು,ಫೆಬ್ರವರಿ,8,2021(www.justkannada.in): ಮೈಸೂರಿನ ಕೆ.ಆರ್.ಕ್ಷೇತ್ರದ ಎರಡು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೈಸೂರು ನಗರದ ಸಂಸ್ಕೃತ ಪಾಠ ಶಾಲೆಯ ಮುಂಭಾಗದಿಂದ ಕೆಂದ್ರ ಸರ್ಕಾರದ ಜನವಿರೋಧಿ, ಬೆಲೆ ಏರಿಕೆಯ ವಿರುದ್ಧ ಅಣಕು ಶವ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.jk

ಸಂಸ್ಕೃತ ಪಾಠ ಶಾಲೆಯಿಂದ ಚಾಮುಂಡಿ ಬೆಟ್ಟದ ಪಾದದ ಸ್ಮಶಾನದ ವರೆಗೆ ಕೆ.ಆರ್ ಕ್ಷೇತ್ರದ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ಅವರ ನೇತೃತ್ವದಲ್ಲಿ ಹಾಗೂ ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆರ್.ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಪಾದಯಾತ್ರೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.Condemnation -price –rise-mysore- mock-up –protest- Congress.

ಈ ಸಂದರ್ಭ ಕೆಪಿಸಿಸಿ ಪದಾಧಿಕಾರಿಗಳು, ಸದಸ್ಯರು, ಮೂಂಚುಣಿ ಘಟಕದ ಅಧ್ಯಕ್ಷರುಗಳು ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್,ವಿದ್ಯಾರ್ಥಿ ಕಾಂಗ್ರೆಸ್, ಎಸ್ಸಿ. ಎಸ್ಟಿ. ಘಟಕ,ಹಿಂದುಳಿದ ವರ್ಗಗಳ ಸಮಿತಿ, ಪಕ್ಷದ ಮಾಧ್ಯಮ ವಿಭಾಗ,ಸೇವಾ ದಳ,ಎಲ್ಲಾ ಕಾಂಗ್ರೆಸ್ ಮುಖಂಡರು ,ಹಿರಿಯ ಮುಖಂಡರು ಭಾಗವಹಿಸಿದ್ದರು.

Key words: Condemnation -price –rise-mysore- mock-up –protest- Congress.