ಮೈಸೂರು ವಿವಿ ನ್ಯಾಕ್ ಮಾನ್ಯತೆ ‘ Aಲ್ಪತೃಪ್ತಿ ‘ ಕಳೆದ 12 ವರ್ಷದಿಂದ ನೇಮಕಾತಿಯೇ ನಡೆದಿಲ್ಲದಿರುವುದು ಕಾರಣ..?

 

ಮೈಸೂರು, ಸೆ.20, 2021 : (www.justkannada.in news ) ಮೈಸೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ವೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ನ (ನ್ಯಾಷನಲ್ ಅಸೆಸ್ಮೆಂಟ್ ಆ್ಯಂಡ್ ಅಕ್ರೆಡೆಸನ್ ಕೌನ್ಸಿಲ್-ನ್ಯಾಕ್) 4ನೇ ಆವೃತ್ತಿಯಲ್ಲಿ ‘ಎ’ ಗ್ರೇಡ್ ಪಡೆದಿದ್ದು, ಮುಂದಿನ ಐದು ವರ್ಷದವರೆಗೆ ಈ ಮಾನ್ಯತೆ ಇರುತ್ತದೆ.

ಸೆ.15 ರಂದು 7 ಜನರ ನ್ಯಾಕ್ ತಂಡ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ, ಎರಡು ದಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿತ್ತು. 2014 ರಿಂದ 2019 ರವರೆಗೆ ನೀಡಿದ ಡೇಟಾವನ್ನೇ ನ್ಯಾಕ್ ಕಮಿಟಿ ಪರಿಗಣಿಸಿತ್ತು. ಒಟ್ಟು ಸಾವಿರ ಅಂಕದಲ್ಲಿ 700 ಅಂಕ ವಿವಿ ಸಲ್ಲಿಸಿದ ಡೇಟಾಗಳಿಗೂ ಹಾಗೂ 300 ಅಂಕಗಳು ನ್ಯಾಕ್ ತಂಡದ ಪರಿಶೀಲನೆ ಬಳಿಕ ನೀಡಬೇಕಾಗಿತ್ತು. ಇದರಲ್ಲಿ ಮೈಸೂರು ವಿವಿಗೆ 3.01 ಅಂಕಗಳು ಅಂದ್ರೆ ಶೇ.75.05 ರಷ್ಟು ಅಂಕ ಪಡೆದು ‘ಎ’ ಗ್ರೇಡ್‌ ಪಡೆದುಕೊಂಡಿದೆ.

ನ್ಯಾಕ್ ಸಮಿತಿ ಪರಿಗಣಿಸುವ ಬಹುತೇಕ ಎಲ್ಲಾ ವಿಭಾಗಗಳಲ್ಲೂ ಮೈಸೂರು ವಿವಿ ಉತ್ತಮ ಸಾಧನೆಯನ್ನೇ ಮಾಡಿದೆ. ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ನಿಗಧಿತ ಟಾರ್ಗೆಟ್ ಮುಟ್ಟುವಲ್ಲಿ ವಿಫಲವಾದ ಕಾರಣ, ನ್ಯಾಕ್ ಸಮಿತಿಗೆ ಅಂಕಗಳನ್ನು ನೀಡಲಾಗಿಲ್ಲ. ಕಳೆದ 12 ವರ್ಷಗಳಿಂದ ಅಂದ್ರೆ 2007 ರಿಂದಲೂ ಮೈಸೂರು ವಿವಿಗೆ ಖಾಯಂ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ. ಪರಿಣಾಮ ಯುಜಿಸಿ ನಿಗಧಿ ಪಡಿಸಿದ ಗೈಡ್ ಲೈನ್ ಗಳ ಗುರಿಮುಟ್ಟುವಲ್ಲಿ ವಿವಿ ವಿಫಲವಾಗಿದೆ. ಇದು ಈಗ ನ್ಯಾಕ್ ಮಾನ್ಯತೆ ಮೇಲೆ ನೇರ ಪರಿಣಾಮ ಬೀರಿದೆ.

ಸ್ವಲ್ಪ ಹಿನ್ನಡೆ : ಕುಲಪತಿ

‘‘ಕಾಯಂ ಪ್ರಾಧ್ಯಾಪಕರ ಸಂಖ್ಯೆ ಕಡಿಮೆ ಇದ್ದ ಕಾರಣ ನ್ಯಾಕ್‌ನಲ್ಲಿ ಎ ಗ್ರೇಡ್ ಸಿಕ್ಕಿದೆ. 15 ವಿದ್ಯಾರ್ಥಿಗಳಿಗೆ ಒಬ್ಬ ಪ್ರಾಧ್ಯಾಪಕ ಇರಬೇಕು ಎಂಬುದು ಯುಜಿಸಿ ನಿಯಮ. ಆದರೆ, ನಮ್ಮಲ್ಲಿ 25 ಮಕ್ಕಳಿಗೆ ಒಬ್ಬ ಪ್ರಾಧ್ಯಾಪಕರಿದ್ದಾರೆ. ಹಾಗಾಗಿ ಮಾನವ ಸಂಪನ್ಯೂಲ ಕೊರತೆಯಿಂದ ಸ್ವಲ್ಪ ಹಿನ್ನಡೆ ಆಗಿ ಹೆಚ್ಚಿನ ಅಂಕ ಸಿಕ್ಕಿಲ್ಲ. ಆದರೆ, ಉಳಿದ ವಿಭಾಗದಲ್ಲಿ ಒಳ್ಳೆಯ ಅಂಕ ಪಡೆದಿದ್ದೇವೆ. ಮೈಸೂರು ವಿವಿ ಬಗ್ಗೆ ನ್ಯಾಕ್ ತಂಡಕ್ಕೂ ಒಳ್ಳೆಯ ಅಭಿಪ್ರಾಯ ಇತ್ತು,’’ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ‘ಜಸ್ಟ್ ಕನ್ನಡ’ ಗೆ ತಿಳಿಸಿದ್ದಾರೆ.

Mysore university-VC- Prof.G Hemanth Kumar-. Jagajyothi Award

ಆದರೆ ಆಶಾಧಾಯಕ ಬೆಳವಣಿಗೆಯಂದ್ರೆ, ಕೇಂದ್ರದ ಎನ್ಐಆರ್ ಎಫ್ ರ್ಯಾಂಕಿಂಗ್ ನಲ್ಲಿ ಮೈಸೂರು ವಿವಿ ಉತ್ತಮ ಸಾಧನೆ ಮಾಡಿರುವುದು. ಸತತವಾಗಿ ಮೂರು ಬಾರಿ ಎನ್.ಐ.ಆರ್.ಎಫ್ ರ್ಯಾಂಕಿಂಗ್ ಪಡೆದರೆ ಆಗ ಅದು ನ್ಯಾಕ್ ಎ-ಪ್ಲಸ್ ರ್ಯಾಂಕ್ ಗೆ ಸಮ. ಈಗಾಗಲೇ ಮೈಸೂರು ವಿವಿ ಸತತ ಎರಡು ಬಾರಿ ಎನ್.ಐ.ಆರ್.ಎಫ್ ರ್ಯಾಂಕಿಂಗ್ ಪಡೆದಿರುವುದರಿಂದ, ಮುಂದಿನ ಸಲವು ಇದೇ ರ್ಯಾಂಕಿಂಗ್ ಕಾಯ್ದುಕೊಂಡರೇ ವಿವಿಗೆ ಅನುಕೂಲವಾಗಲಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

key woreds : mysore-university-NAACK-ranking-NIRF-ranking-vc-hemanth.kumar