ಸುಶಾಂತ್ ‘ದಿಲ್​ ಬೆಚಾರ’ ಚಿತ್ರದ ಟೀಸರ್ ಇಂದು ಬಿಡುಗಡೆ

ಮುಂಬೈ, ಜುಲೈ 06, 2020 (www.justkannada.in): ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಕೊನೆಯ ಸಿನಿಮಾ ‘ದಿಲ್​ ಬೆಚಾರ’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.

ಚಿತ್ರತಂಡ ‘ದಿಲ್​ ಬೆಚಾರ’ ಸಿನಿಮಾವನ್ನು ಹಾಟ್​+ಡಿಸ್ನಿಯಲ್ಲಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಈ ಸಿನಿಮಾದ ಬಿಡುಗಡೆಗೆ ಬಾಲಿವುಡ್​ನ ಅನೇಕ ನಟ-ನಟಿಯರು ಸಾಥ್​ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ‘ದಿಲ್​ ಬೆಚಾರ’ ಸಿನಿಮಾ ಪೋಸ್ಟರ್​ ಹಾಕುವ ಮೂಲಕ ಪ್ರಚಾರ​ ಮಾಡಿದ್ದಾರೆ. ಇನ್ನು ‘ದಿಲ್​ ಬೆಚಾರ’ ಸಿನಿಮಾದಲ್ಲಿ ಸುಶಾಂತ್​ಗೆ ನಾಯಕಿಯಾಗಿ ಸಂಜನಾ ಸಂಘಿ ನಟಿಸುತ್ತಿದ್ದಾರೆ.