ರಂಗಾಯಣದಲ್ಲಿ ನಾಳೆ ಭಾರತೀಯ ರಂಗಶಿಕ್ಷಣ ಕೇಂದ್ರ ಶಾಲಾ ಪ್ರಾರಂಭೋತ್ಸವ…

ಮೈಸೂರು,ನವೆಂಬರ್,5,2020(www.justkannada.in):  ಕೊರೋನಾ ನಡುವೆ  ರಂಗಾಯಣದಲ್ಲಿ ಮತ್ತೆ ರಂಗ ಶೈಕ್ಷಣಿಕ ಚಟುವಟಿಕೆ ಗರಿಗೆದರಿದ್ದು ನಾಳೆ ಭಾರತೀಯ ರಂಗಶಿಕ್ಷಣ ಕೇಂದ್ರ ಶಾಲಾ ಪ್ರಾರಂಭೋತ್ಸವವನ್ನ ಹಮ್ಮಿಕೊಳ್ಳಲಾಗಿದೆ.  jk-logo-justkannada-logo

ಶಾಲಾ ಕಾಲೇಜುಗಳ ಆರಂಭಕ್ಕೂ ಮುನ್ನ ಕೋವಿಡ್ ಮಾರ್ಗಸೂಚಿಯಡಿ ರಂಗಾಯಣದಲ್ಲಿ ರಂಗ ಶೈಕ್ಷಣಿಕ ಚಟುವಟಿಕೆ ಆರಂಭವಾಗಿದ್ದು, ನಾಳೆ ನಡೆಯುವ ಶಾಲಾ ಪ್ರಾರಂಭೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಡಾ.ವಿ.ನಾಗೇಶ್ ಬೆಟ್ಟಕೋಟೆ ಭಾಗಿಯಾಗಲಿದ್ದಾರೆ. ಪ್ರಾರಂಭೋತ್ಸವ ವೇಳೆಯಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಉಪಸ್ಥಿತರಿದ್ದಾರೆ.

ರಂಗಾಯಣದ ಯೋಚನೆ ಹಾಗೂ ಯೋಜನೆಗಳ ಕುರಿತು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾಹಿತಿ ನೀಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 10 ತಿಂಗಳ ಭಾರತೀಯ ರಂಗಶಿಕ್ಷಣ ಕೋರ್ಸ್ ಗೆ ವಿದ್ಯಾರ್ಥಿಗಳ ಆಯ್ಕೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿ ರಂಗಭೂಮಿಯ ಹಲವು ವಿಭಾಗಗಳ ಪರಿಚಯ ಮಾಡಲಾಗುತ್ತದೆ. ಅಭಿನಯದ ಜೊತೆ ರಂಗಮಂಚದ ತೆರೆ ಹಿಂದಿನ ವಿಭಾಗಗಳ ಕುರಿತು ಮಾಹಿತಿ ನೀಡಲಾಗುತ್ತದೆ.mysore-rangayana-tomorrow-ranga-shiksana-kendra-shcool-startinge-ceremony

ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೆಳಕು, ಸಂಗೀತ, ವಸ್ತ್ರ ವಿನ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಲಾಗುತ್ತದೆ. ಭಾರತೀಯ ರಂಗ ಶಿಕ್ಷಣ ಕೇಂದ್ರ ಮುಖ್ಯಸ್ಥ ರಾಮನಾಥ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ. ದಶಕದಿಂದ ರಂಗಾಯಣದ ವತಿಯಿಂದ ರಂಗಾಸಕ್ತ ಯುವಕ, ಯುವತಿಯರಿಗೆ ರಂಗ ತರಬೇತಿ ಕೋರ್ಸ್ ನಡೆಸಲಾಗುತ್ತಿದೆ.

Key words:mysore- Rangayana- tomorrow- ranga shiksana Kendra-shcool –startinge- ceremony