ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ನ್ಯಾಯಯುತ ತನಿಖೆ ನಡೆಸಲಿ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಬೆಂಗಳೂರು,ನವೆಂಬರ್,5,2020(www.justkannada.in): ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ವಶಕ್ಕೆ ಪಡೆದ ವಿಚಾರ ಸಂಬಂಧ, ಸಿಬಿಐ ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ತನಿಖೆ ನಡೆಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.jk-logo-justkannada-logo

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಎರಡು ಪಕ್ಷದವರು ವಿನಯ್ ಕುಲಕರ್ಣಿ ವಿಚಾರ ರಾಜಕೀಯ ಲಾಭ ಪಡೆಯುತ್ತಾ ಇದ್ದಾರೆ. ಆದರೆ, ಅವರು ಅಧಿಕಾರಿಗಳು ಮಾತ್ರ ನ್ಯಾಯಯುತ ತನಿಖೆ ನಡೆಸಬೇಕು. ಯೋಗಿಶ್ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಸರ್ಕಾರ ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.vinay-kulkarni-cbi-fair-investigation-political-influence-former-cm-hd-kumaraswamy

ಈ ಪ್ರಕರಣದ ಬಗ್ಗೆ ಹಲವಾರು ರೀತಿ ಗುಮಾನಿ ಇತ್ತು. ಯೋಗಿಶ್ ಗೌಡ ನಿಧನದ ಸತ್ಯಾಸತ್ಯತೆ ಏನಿದೆ. ಯಾವುದೇ ರಾಜಕೀಯಕ್ಕೆ ಒಳಗಾಗದೇ ನ್ಯಾಯ ಒದಗಿಸಬೇಕು. ಯಾವುದೇ ರೀತಿಯ ಪ್ರಭಾವ ಇರದೇ ನ್ಯಾಯ ಕೊಡಿಸಬೇಕು ಎಂದು ಹೆಚ್​.ಡಿ ಕುಮಾರಸ್ವಾಮಿ  ಆಗ್ರಹಿಸಿದ್ದಾರೆ.

Key words: vinay kulkarni-CBI- fair- investigation –  political –influence-Former CM HD Kumaraswamy.