Saturday, August 15, 2026

BDA Apartments

Home Front Page ಜೆಡಿಎಸ್ ಗೆ ಅವಕಾಶವಿದೆ ಅಂತಾ ಡಿಕೆಶಿ ಪರೋಕ್ಷವಾಗಿ ಹೇಳಿದ್ದಾರೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್.

ಜೆಡಿಎಸ್ ಗೆ ಅವಕಾಶವಿದೆ ಅಂತಾ ಡಿಕೆಶಿ ಪರೋಕ್ಷವಾಗಿ ಹೇಳಿದ್ದಾರೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್.

ಮೈಸೂರು,ಜುಲೈ,19,2022(www.justkannada.in): ಎಸ್ ಎಂ ಕೃಷ್ಣ ಒಕ್ಕಲಿಕ ಸಮುದಾಯದವರು. ಕೆಪಿಸಿಸಿ ಅಧ್ಯಕ್ಷರಾಗಿ ನಂತರ ಸಿಎಂ ಆದ್ರು. ಒಕ್ಕಲಿಗ ಸಮುದಾಯದವರಿಗೆ ಸಿಎಂ ಆಗುವ ಅವಕಾಶ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೀಡಿದ್ಧ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಆಗಲು ಕಾಂಗ್ರೆಸ್ ನಲ್ಲಿ ಪೈಪೋಟಿ ಕ್ಯೂ ಇದೆ. ಒಕ್ಕಲಿಗರು ಕಾಂಗ್ರೆಸ್ ನಲ್ಲಿ ಸಿಎಂ ಆಗಲು ಅವಕಾಶವಿಲ್ಲ,. ಹೀಗಾಗಿ ಜೆಡಿಎಸ್ ಗೆ ಅವಕಾಶ ಇದೆ ಅಂತಾ ಪರೋಕ್ಷವಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ. ಅಂತಹದೊಂದು ಅವಕಾಶ ಸಿಕ್ಕಿದೆ. ಅವಕಾಶ ಯಾರಿಗೆ ಇದೆ ಅನ್ನೋದನ್ನ ಹೇಳಲ್ಲ ಉಳಿಸಿಕೊಳ್ಳೋದು ಬೆಳೆಸಿಕೊಳ್ಳುವುದು ನಿಮಗೆ ಬಿಟ್ಟಿದ್ದು.  ದೇವರು ವರ , ಶಾಪ ಕೊಡಲ್ಲ, ಅವಕಾಶ ಕೊಡ್ತಾನೆ. ಅವಕಾಶ ಸರಿಯಾಗಿ ಬಳಸಿಕೊಳ್ಳಿ ಎಂದು ಒಕ್ಕಲಿಗ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು.

Key words: DK shivakumar- indirectly – chance – JDS- Former CM- HD Kumaraswamy