ಬಾರ್ ವಿರುದ್ದ ರಮ್ಮನಹಳ್ಳಿ ಗ್ರಾಮಸ್ಥರ ಸಮರ: ಪ್ರತಿಭಟನೆ ನಡೆಸಿ ಬಾರ್ ಮುಚ್ಛಿಸಿದ ಸ್ಥಳೀಯರು…

ಮೈಸೂರು,ಸೆಪ್ಟೆಂಬರ್,23,2020(www.justkannada.in) : ಮೈಸೂರು-ಮಂಡ್ಯ ಜಿಲ್ಲೆ ಗಡಿಯಲ್ಲಿ ತೆರೆದಿದ್ದ ಬಾರ್ ಅನ್ನು ಸ್ಥಳೀಯರು ಪ್ರತಿಭಟನೆ ನಡೆಸುವ ಮೂಲಕ ಮುಚ್ಚಿಸಿದ್ದಾರೆ.jk-logo-justkannada-logo

ಮೈಸೂರು ತಾಲೂಕು ಕಾಳಿಸಿದ್ದನಹುಂಡಿ, ರಮ್ಮನಹಳ್ಳಿ ಗ್ರಾಮದ ಮಧ್ಯೆ ಇದ್ದ  ಉಗ್ರ ನರಸಿಂಹ ಬಾರ್ ಅನ್ನು  ಮೈಸೂರು ಜಿಲ್ಲೆ ಗಡಿ ಬಿಟ್ಟು ಮಂಡ್ಯ ವ್ಯಾಪ್ತಿಯಲ್ಲಿ ಬಾರ್ ತೆರೆಯಲಾಗಿತ್ತು. ಈ ಹಿಂದೆ ಇದರಿಂದ 500 ಮೀ. ದೂರದಲ್ಲಿದ್ದ ಉಗ್ರ ನರಸಿಂಹ ಬಾರ್ ಅನ್ನು ರಮ್ಮನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಮೂಲಕ ಮುಚ್ಚಿಸಿದ್ದರು.

ನಂತರ ಉದ್ಯಮಿ ಈಗ ಮೈಸೂರು ಜಿಲ್ಲೆ ಗಡಿ ಬಿಟ್ಟು ಮಂಡ್ಯ ವ್ಯಾಪ್ತಿಯಲ್ಲಿ ಬಾರ್ ತೆರೆದಿದ್ದು ಇದೀಗ ಈ ಬಾರನ್ನು ಸಹ ಗ್ರಾಮಸ್ಥರು ಪ್ರತಿಬಟನೆ ನಡೆಸಿ ಮುಚ್ಚಿಸಿದ್ಧಾರೆ.

ಉದ್ಯಮಿ ಈ ಹಿಂದೆ ಹೋಟೆಲ್ ನಡೆಸುವ ಲೈಸೆನ್ಸ್ ಪಡೆದು ಬಾರ್ ನಡೆಸಲಾಗುತ್ತಿತ್ತು. ಇದನ್ನು ಪತ್ತೆ ಹಚ್ಚಿ ಮೇಳಾಪುರ ಗ್ರಾಮ ಪಂಚಾಯತಿ ಲೈಸೆನ್ಸ್ ರದ್ದು ಪಡಿಸಿತ್ತು. ಇದೀಗ ಪಂಚಾಯಿತಿ ಅಧಿಕಾರ ಅವಧಿ ಮುಗಿದಿದೆ. ಇದಕ್ಕೆ ಹೊಂಚು ಹಾಕಿ ಬಾರ್ ಓಪನ್ ಮಾಡಲಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಹಾಗೆಯೇ ಬಾರ್ ಆರಂಭಿಸುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಿಂದ ಬಾರ್ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಬಾರ್ ತೆರೆಯುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಡಿದು ಮನೆಯಲ್ಲಿ ಗಲಾಟೆ ಮಾಡ್ತಾರೆ.  ಮನೆಯಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಕುಡಿಯುತ್ತಿದ್ದಾರೆ. ಇದರಿಂದ ಕುಟುಂಬದ ನೆಮ್ಮದಿ ಹಾಳು ಹಾಳಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ.mysore-ramamanahalli-bar-protest-close

ಚಿಕ್ಕ ಮಕ್ಕಳು ಕೂಡ ಕುಡಿತಕ್ಕೆ ಬಲಿಯಾಗುತ್ತಿದ್ದು, ಪೋಷಕರ ಮೇಲೆ ಹಲ್ಲೆ ಮಾಡುತ್ತಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಇಲ್ಲಿ ಬಾರ್  ತೆರೆಯಲು ಬಿಡುವುದಿಲ್ಲವೆಂದು ಮಹಿಳೆಯರ ಕಿಡಿಕಾರಿದರು. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ.

Key words: mysore-Ramamanahalli- bar – protest-close