ಸತತ 4ನೇ ಬಾರಿಗೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ‘’ಅತ್ಯುತ್ತಮ ನಿರ್ವಹಣೆಯ ನಿಲ್ದಾಣ ಪ್ರಶಸ್ತಿ’’

ಮೈಸೂರು,ಅಕ್ಟೋಬರ್,14,2020(www.justkannada.in) : ಸತತವಾಗಿ 4ನೇ ಬಾರಿಗೆ ಮೈಸೂರು ರೈಲ್ವೆ ನಿಲ್ದಾಣವು ”ಅತ್ಯುತ್ತಮ ನಿರ್ವಹಣೆಯ ನಿಲ್ದಾಣ” ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.jk-logo-justkannada-logo

ನೈಋತ್ಯ ರೈಲ್ವೆಯಪ್ರಮುಖನಿಲ್ದಾಣಗಳ ವಿಭಾಗದಲ್ಲಿ ಮೈಸೂರು ರೈಲ್ವೆ ನಿಲ್ದಾಣವನ್ನು 2019-20ನೇ ವರ್ಷದಅತ್ಯುತ್ತಮ ನಿರ್ವಹಣೆಯ ನಿಲ್ದಾಣಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಹುಬ್ಬಳ್ಳಿಯಲ್ಲಿ ನಡೆದ ನೈಋತ್ಯ ರೈಲ್ವೆಯ 65ನೇ ರೈಲ್ವೆ ವಾರ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಅವರಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ನೈರುತ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Best-Handling-Station-Award-Mysore Railway Station-4th time-row

ಮೈಸೂರು ವಿಭಾಗದ ಭದ್ರತಾ ವಿಭಾಗಕ್ಕೆ 2019-20ನೇ ಸಾಲಿನ ದಕ್ಷತೆಯ ಪ್ರಶಸ್ತಿ

2019-20ನೇ ಸಾಲಿನಲ್ಲಿ ರೈಲ್ವೇ ಇಲಾಖೆ ಕೈಗೊಂಡ ಸಮಗ್ರ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ಮೈಸೂರು ರೈಲ್ವೆ ನಿಲ್ದಾಣವು ಕಟ್ಟಡದ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಂಡು ಸಾಕಷ್ಟು ಕಾಳಜಿಯೊಂದಿಗೆ ಅನೇಕ ಪ್ರಯಾಣಿಕ ಸ್ನೇಹಿ ಉಪಕ್ರಮಗಳನ್ನು ಹೆಚ್ಚಿಸಿದೆ.

 

ಸ್ವರ್ಣಜಯಂತಿ ವಾರದ ಸೂಪರ್ ಫಾಸ್ಟ್ ರೈಲಿಗೆ ಅತ್ಯುತ್ತಮವಾಗಿ ನಿರ್ವಹಿಸಿದ ರೇಕ್ಪ್ರಶಸ್ತಿ

ಮೈಸೂರು ಮತ್ತು ನಿಜಾಮುದ್ದೀನ್ (ನವದೆಹಲಿ) ನಡುವೆ ಚಲಿಸುವ ಪ್ರತಿಷ್ಠಿತ ಸ್ವರ್ಣಜಯಂತಿ ವಾರದ ಸೂಪರ್ ಫಾಸ್ಟ್ ರೈಲಿಗೆ 2019-20ನೇ ಸಾಲಿನ ನೈಋತ್ಯ ರೈಲ್ವೆಯಲ್ಲಿಅತ್ಯುತ್ತಮವಾಗಿ ನಿರ್ವಹಿಸಿದ ರೇಕ್ಎಂದು ಪ್ರಶಸ್ತಿ ನೀಡಲಾಗಿದೆ.

 

ವಿಭಾಗದ ಸಂಪೂರ್ಣ ಕಾರ್ಯಪಡೆಗೆ, ತನ್ನ ಲಕ್ಷಾಂತರ ಗ್ರಾಹಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಕೈಗೆಟುಕುವ ದರದ ಪ್ರಯಾಣವನ್ನು ಒದಗಿಸುವಂತೆ ಮಾಡಲು ಅತ್ಯುತ್ತಮ ಪ್ರಯತ್ನವನ್ನು ನೀಡುವಂತೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ಸೂಚಿಸಿದ್ದು, ಮೈಸೂರು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅವರ 2019-20 ಅವಧಿಯಲ್ಲಿನ ಅಸಾಧಾರಣ ಕಾರ್ಯಗಳಿಗಾಗಿ ಅಭಿನಂದನೆ ಸಲ್ಲಿಸಿದ್ದಾರೆ.

 

key words : Best-Handling-Station-Award-Mysore Railway Station-4th time-row