ಮುತ್ತಯ್ಯ ಮುರುಳೀಧರನ್ ದಾಖಲೆ ಮುರಿದ ಅಶ್ವಿನ್ !

ಬೆಂಗಳೂರು, ನವೆಂಬರ್ 15, 2019 (www.justkannada.in): ಭಾರತದ ಹಿರಿಯ ಸ್ಪಿನ್​ ಬೌಲರ್​ ರವಿಚಂದ್ರನ್​ ಅಶ್ವಿನ್​ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ 250 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

ಬಾಂಗ್ಲಾದೇಶದ ನಾಯಕ ಮೊಮಿನುಲ್​ ಹಕ್​ ವಿಕೆಟ್​ ಪಡೆಯುತ್ತಿದ್ದಂತೆ ಅಶ್ವಿನ್​ ಭಾರತದಲ್ಲಿ 250 ವಿಕೆಟ್​ ಪೂರ್ಣಗೊಳಿಸಿದರು. ಅಲ್ಲದೆ ವೇಗವಾಗಿ ಈ ಸಾಧನೆ ಮಾಡಿದ ದಾಖಲೆಯನ್ನು ಮುತ್ತಯ್ಯ ಮುರುಳೀದರನ್​ ಜೊತೆ ಹಂಚಿಕೊಂಡರು.

ಮುತ್ತಯ್ಯ ಮುರುಳೀಧರನ್​ ತವರಿನಲ್ಲಿ 250 ವಿಕೆಟ್​ ಪಡೆಯಲು 42 ಪಂದ್ಯಗಳನ್ನಾಡಿದ್ದರು. ಆಶ್ವಿನ್​ ಸಹ ಅಷ್ಟೇ ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ.