ಮೈಸೂರು ಅರಮನೆಯಲ್ಲಿ ಕಳಸ ಪೂಜೆ ಸೇರಿ ಇತರೆ ಧಾರ್ಮಿಕ ಆಚರಣೆ : ರಾಜವಂಶಸ್ಥ ಯದುವೀರ್ ರಿಂದ ಇಂದು ಖಾಸಗಿ ದರ್ಬಾರ್ ….

ಮೈಸೂರು,ಅಕ್ಟೋಬರ್,17,2020(www.justkannada.in):  ಕೊರೋನಾ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಈ ಬಾರಿ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿದ್ದು ಈ ನಡುವೆ ಅರಮನೆಯಲ್ಲಿ ಪಾರಂಪರಿಕ ದಸರಾ ಕಾರ್ಯಕ್ರಮಗಳು ಆರಂಭವಾಗಿವೆ.jk-logo-justkannada-logo

ಮೈಸೂರು ಅರಮನೆಯಲ್ಲಿ ಪಾರಂಪರಿಕ ದಸರಾ ಪೂಜಾಕಾರ್ಯಕ್ರಮಗಳು ಆರಂಭವಾಗಿವೆ.ಬೆಳಿಗ್ಗೆ 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಯದುವಂಶದ ರಾಜವಂಶಸ್ಥ ಯದಯವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ ಮಾಡಲಾಯಿತು. ಬಳಿಕ 10 ಗಂಟೆ ವೇಳೆಗೆ ಕಳಸ ಪೂಜೆ ಸೇರಿ ಇತರ ಧಾರ್ಮಿಕ ಆಚರಣೆ ಮಾಡಲಾಯಿತು.mysore palace- traditional -dasara -Dynasty –kasagi  Durbar - Yadaveer.

ಇನ್ನು ಬೆಳಗ್ಗೆ 6.15 ರಿಂದ 6.30ರ ಶುಭ ಮಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗಿದ್ದು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಅವರು ಇಂದಿನಿಂದ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ನಡುವೆ ಕೊರೋನಾ ಹಿನ್ನೆಲೆ ಖಾಸಗಿ ದರ್ಬಾರ್ ಗೆ ಮಾಧ್ಯಮಗಳಿಗೂ ನಿರ್ಬಂಧ ವಿಧಿಸಲಾಗಿದೆ.

Key words: mysore palace- traditional -dasara -Dynasty –kasagi  Durbar – Yadaveer.