ದೇವಸ್ಥಾನಗಳನ್ನು ಓಪನ್ ಮಾಡಲು ಅನುಮತಿ ನೀಡುವ ಕುರಿತು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದು ಹೀಗೆ.

ಬೆಂಗಳೂರು,ಜುಲೈ,1,2021(www.justkannada.in): ಸುರಕ್ಷತಾ ಕ್ರಮಗಳನ್ನ ಅನುಸರಿಸಿ ದೇಗುಲಗಳ ಓಪನ್ ಗೆ ಅನುಮತಿ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡ ಬೇಕಿದೆ, ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವ ಕಡೆ ವಿನಾಯಿತಿ ನೀಡಲಾಗುತ್ತದೆ.  ಸಾವಿರಾರು ಜನ ಒಂದೇ ಬಾರಿ ದೇಗುಲಕ್ಕೆ ಧಾವಿಸಿದ್ರೆ ಆಗಬಹುದಾದ ಪರಿಣಾಮಗಳ ಬಗ್ಗೆ ಗಮನ ಇದೆ. ಸುರಕ್ಷತಾ ಕ್ರಮ ಅನುಸರಿಸಿ ದೇಗುಲ ಓಪನ್ ಗೆ ಚಿಂತನೆ ನಡೆಸಲಾಗಿದೆ ಎಂದರು.

ಜುಲೈ 5ರ ಬಳಿಕ ಯಾವುದಾದರೊಂದು ರೂಪದಲ್ಲಿ ಸರಳೀಕರಣವಾಗಬಹುದು. ದೇವಸ್ಥಾನದಲ್ಲಿ ಶೇ. 50 ರಷ್ಟು ಅವಕಾಶ ನೀಡಲು ಆಗಲ್ಲ. ಟೋಕನ್ ವ್ಯವಸ್ಥೆಯನ್ನೂ ಮಾಡಲು ಆಗಲ್ಲ.  ಸೀಮಿತ ಸಾಂಕೇತಿಕ ಪೂಜೆಗಳಿಗೆ ಅವಕಾಶ ನೀಡುವ ಬಗ್ಗೆ ಆರೋಗ್ಯ ಇಲಾಖೆ ಜತೆ ಚರ್ಚಿಸುತ್ತೇವೆ. ಆರೋಗ್ಯ ಇಲಾಖೆ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ನಾಳೆ ಸಿಎಂ ನೇತೃತ್ವದ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ. ಊಟೋಪಚಾರ, ಉತ್ಸವ ಜಾತ್ರೆಗಳಿಗೆ ಅನುಮತಿ ಕಷ್ಟ.  ದೇವರ ದರ್ಶನಕ್ಕೆ ಅವಕಾಶ ನೀಡಲು ಚಿಂತನೆ ನಡೆಸಲಾಗುತ್ತದೆ. ಸಾಧ್ಯವಾದಷ್ಟು ಅವಕಾಶ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಲಾಗುತ್ತದೆ ಎಂದು  ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

Key words: Minister- Kota Srinivasa Poojary -permission –open- temples