“ಮೈಸೂರಿನಲ್ಲಿ ಮೇಳೈಸಿದ ಕನ್ನಡ ಜಾತ್ರೆ; ಮಾನಸಗಂಗೋತ್ರಿಯಲ್ಲಿ ಕನ್ನಡದ ಕಂಪು”

ಮೈಸೂರು,ಫೆಬ್ರವರಿ,18,2021(www.justkannada.in) : ಮೈಸೂರಿನಲ್ಲಿ ಮೇಳೈಸಿದ ಕನ್ನಡ ಜಾತ್ರೆ. ಗುರುವಾರ ಮೈಸೂರು ವಿಶ್ವವಿದ್ಯಾನಿಲಯ ಆವರಣದ ತುಂಬೆಲ್ಲಾ ಕನ್ನಡದ ಕಂಪು ಹರಡಿತು.Mysore-Kannada Fair-Mansagangotri

ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ವತಿಯಿಂದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಮೈಸೂರು ನಗರ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು.

ಸಮ್ಮೇಳನವನ್ನು ಹಿರಿಯ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಿದರು.Mysore-Kannada Fair-Mansagangotri

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಮಾನಸಗಂಗೋತ್ರಿ ಮುಖ್ಯ ದ್ವಾರದಿಂದ ವಿಜ್ಞಾನ ಭವನದವರೆಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು.

ಸಮ್ಮೇಳನದಲ್ಲಿ ಕವಿಗೋಷ್ಠಿ ಸೇರಿದಂತೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಕಾರ್ಮಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾದ ಆರ್ಯಾಂಬ ಪಟ್ಟಾಭಿ, ಶಾಸಕ ತನ್ವಿರ್ ಸೇಠ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ, ನಗರ ಕಸಾಪ ಅಧ್ಯಕ್ಷ ಕೆ.ಎಸ್.ಶಿವರಾಮು, ಕಸಾಪ ಪದಾಧಿಕಾರಿಗಳು ಸೇರಿದಂತೆ ಕನ್ನಡ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

key words : Mysore-Kannada Fair-Mansagangotri