ಕಾಂಗ್ರೆಸ್‌ನದ್ದು ಯಾವಾಗಲೂ ಓಲೈಕೆ ರಾಜಕಾರಣ :ಸಂಸದ ಪ್ರತಾಪ್ ಸಿಂಹ ಟೀಕೆ 

ಮೈಸೂರು,ಡಿಸೆಂಬರ್,10,2020(www.justkannada.in) : ತಿನ್ನೋದಕ್ಕಾಗಿ ಕುರಿ,ಕೋಳಿ ಆಡು ಇವೆ. ಅವುಗಳಿಗೆ ಯಾರು ಮಾತೆ ಅನ್ನೋಲ್ಲ. ಕಾಂಗ್ರೆಸ್‌ನದ್ದು ಯಾವಾಗಲೂ ಓಲೈಕೆ ರಾಜಕಾರಣ. ಗೋಹತ್ಯೆ ಕಾಯ್ದೆ ವಿರೋಧಿಸಿ ಮತ್ಯಾರನ್ನೋ ಓಲೈಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. logo-justkannada-mysoreಗೋಹತ್ಯಾ ನಿಷೇದ ಕಾಯ್ದೆಗೆ ಅನುಮೋದನೆ ಹಿನ್ನೆಲೆ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಪಿಂಜಾರಾಪೋಲ್ ಗೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ, ಹಸುಗಳಿಗೆ ಬಾಳೆಹಣ್ಣು, ಬೆಲ್ಲ ತಿನ್ನಿಸಿದರು.

ಈ ಸಂದರ್ಭ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜೈಕಾರ ಕೂಗಿ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಸೇರಿ ಹಲವು ಕಾರ್ಯಕರ್ತರು ಸಾಥ್ ನೀಡಿದರು.

ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೇವಲ ಮೃಗಾಲಯದಲ್ಲಿನ ಪ್ರಾಣಿಗಳ ಆಹಾರದ ಬಗ್ಗೆ ಕಾಳಜಿ ಇದ್ದರೆ ಹೇಳಿ. ಆ ಪ್ರಾಣಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡೋಣ. ಆ ಬಗ್ಗೆ ನಮ್ಮೊಂದಿಗೆ ನೀವು ಪ್ರತ್ಯೇಕವಾಗಿ ಚರ್ಚೆ ಮಾಡಿ ಆಗ ನಿಮಗೆ ಉತ್ತರ ಕೊಡ್ತಿವಿ ಎಂದರು.

ಚರ್ಮೋದ್ಯಮ, ಆಹಾರ ಪದ್ದತಿ ಅನ್ನೊ ಕ್ಷುಲ್ಲಕ ಕಾರಣ ಕೊಡಬೇಡಿ. ಭಾರತೀಯರು ತಾಯಿಯನ್ನ‌ ಬಿಟ್ಟರೆ ಗೋವಿಗೆ ಮಾತ್ರ ತಾಯಿ ಸ್ಥಾನ ಕೊಟ್ಟಿದ್ದಾರೆ. ಅದನ್ನ ಅರ್ಥ ಮಾಡಿಕೊಂಡ ಬಿಎಸ್‌ವೈ ಆ ಕಾನೂನು ಜಾರಿ ಮಾಡಿದ್ದಾರೆ ಎಂದು ಹೇಳಿದರು.

ಕುರಿ,ಕೋಳಿ ಆಡು ಗಳನ್ನ ಮಾತೆ ಅನ್ನೋಲ್ಲ

ತಿನ್ನೋದಕ್ಕಾಗಿ ಕುರಿ,ಕೋಳಿ ಆಡು ಇವೆ. ಅವುಗಳಿಗೆ ಯಾರು ಮಾತೆ ಅನ್ನೋಲ್ಲ. ಕಾಂಗ್ರೆಸ್‌ನವರು ಓಲೈಕೆ ಮಾಡುವುದ ಬಿಟ್ಟು ಬೇರೆ ರಾಜಕಾರಣ ಮಾಡಲಿ ಎಂದರು.

ದೆಹಲಿಯಲ್ಲಿ ರೈತರ ಹೋರಾಟ ವಿಚಾರವಾಗಿ ಮಾತನಾಡಿ, ಪಂಜಾಬ್ ರೈತರಿಗೆ ಪಂಜಾಬ್ ನಲ್ಲೇ ಬೆಂಬಲವಿಲ್ಲ. ಅದಕ್ಕಾಗಿ ದೆಹಲಿ ತನಕ ಹೋಗಿದ್ದಾರೆ. ಅಷ್ಟೇ. ಇದು ಮತ್ತೊಂದು ಸಿಎಎ ಹೋರಾಟ ಆಗುತ್ತೆ ಅಷ್ಟೆ. ಸಿಎಎನಲ್ಲಿ ಯಾವ ಮುಸ್ಲಿಂರಿಗೂ ಸಮಸ್ಯೆ ಆಗೋಲ್ಲ ಎಂದರು ಪ್ರತಿಭಟನೆ ಮಾಡಿದರು.

ಈಗ ರೈತರಿಗೆ ಸಮಸ್ಯೆ ಆಗೋಲ್ಲ ಎಂದರು ಪ್ರತಿಭಟನೆ ಮಾಡ್ತಿದ್ದಾರೆ. ಪ್ರತಿಭಟನೆಯ ಉದ್ದೇಶ ಬೇರೆ ಇದ್ದಹಾಗೇ ಕಾಣಿಸುತ್ತಿದೆ. ಅದಕ್ಕಾಗಿ ಅವರು ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.

ಪಂಜಾಬ್ ರೈತರು ದೆಹಲಿಯಲ್ಲಿ ಯಾಕೇ ಬಂದು ಹೋರಾಟ ಮಾಡ್ತಿದ್ದಾರೆ. ಪಂಜಾಬ್‌ನಲ್ಲಿ ಹೋರಾಟ ಮಾಡಿದ್ರೆ ನ್ಯಾಯ ಸಿಗೋಲ್ವಾ. ದೆಹಲಿಯಲ್ಲಿ ಹಲವು ದೇಶದ ರಾಯಭಾರಿ ಕಚೇರಿ ಇದೆ. ಸೇನೆಯ ಹಲವು ಭದ್ರತಾ ಕಚೇರಿಗಳಿಗೆ‌. ಸೂಕ್ಷ್ಮ ಪ್ರದೇಶಕ್ಕೆ ನುಗ್ಗಿ ಪ್ರತಿಭಟನೆ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ.

 Congress,always,been,political,leader,MP Pratap shinmha,criticized

key words : Congress-always-been-political-leader-MP Pratap shinmha-criticized