ಈ ಬಾರಿ ಬಜೆಟ್ ನಲ್ಲಿ ಮೈಸೂರು ಸಮಗ್ರ ಅಭಿವೃದ್ಧಿಗೆ ಒತ್ತು- ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್.

ಮೈಸೂರು,ಏಪ್ರಿಲ್,4,2022(www.justkannada.in): ಈ ಬಾರಿ ಮುಡಾ ಬಜೆಟ್ ನಲ್ಲಿ ಮೈಸೂರು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್‌.ವಿ.ರಾಜೀವ್ ಹೇಳಿದರು.

ಸುದ್ಧಿಗೋಷ್ಠಿ ನಡೆಸಿ ಮುಡಾ ಬಜೆಟ್ ಕುರಿತು ವಿಶ್ಲೇಷಣೆ ಮಾಡಿದ ಹೆಚ್‌.ವಿ.ರಾಜೀವ್,  ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದ ಹಿನ್ನೆಲೆ, ಮುಡಾ ಬಡಾವಣೆಗೆ 150 ಕೋಟಿ ಅನುದಾನದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ಯೋಜನೆಗೆ ನಿರ್ಧರಿಸಲಾಗಿದೆ. ಬಹುಮಹಡಿ ಗುಂಪು ವಸತಿ ಯೋಜನೆಗೆ ಆದ್ಯತೆ ನೀಡಲಾಗಿದೆ. ಮೈಸೂರು ಮೆಟ್ರೋ ಯೋಜನೆಗೆ ಡಿಪಿಆರ್ ತಯಾರಿಸಲು 1 ಕೋಟಿ ಅನುದಾನ ಮೀಸಲು, ಕೆರೆಗಳ ಅಭಿವೃದ್ಧಿ ಹಾಗೂ ಪುನಶ್ಚೇತನಕ್ಕಾಗಿ 9 ಕೋಟಿ ನೀಡಲಾಗಿದೆ ಎಂದರು.

ಇನ್ನು ಕೆರೆ ಶುದ್ದೀಕರಣಕ್ಕೆ ಆಸ್ಟ್ರೇಲಿಯಾ ತಂತ್ರಜ್ಞಾನ ಬಳಕೆ ಮಾಡಲು ಒತ್ತು ನೀಡಲಾಗುತ್ತಿದೆ. ಬಯೋ ತಾಂತ್ರಿಕತೆ ಮೂಲಕ ದೇವನೂರು ಕೆರೆ, ಕೂರ್ಗಳ್ಳಿ ಕೆರೆ, ಕೇರ್ಗಳ್ಳಿ ಕೆರೆ, ದಳವಾಯಿ ಕೆರೆ ಶುದ್ದೀಕರಣ, ಪ್ರಾಧಿಕಾರದ ನಿರ್ಮಿತ ಬಡಾವಣೆಗಳಲ್ಲಿ ರಾಜಕಾಲುವೆ ದುರಸ್ತಿ ಹಾಗೂ ಅಭಿವೃದ್ಧಿಗಾಗಿ ಯೋಜನೆ, ಉಪವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಒತ್ತು.ಹೊರವರ್ತುಲ ರಸ್ತೆಗಳಲ್ಲಿ ಎಲ್.ಇ.ಡಿ ಬಲ್ಬ್ ಅಳವಡಿಸಲು ಚಿಂತನೆ, ಪ್ರಾಧಿಕಾರದ ವ್ಯಾಪ್ತಿಯ ಸ್ಮಶಾನಗಳ ಅಭಿವೃದ್ಧಿಗೆ 3 ಕೋಟಿ ಮೀಸಲಿಡಲಾಗಿದೆ ಒಟ್ಟಾರೇ ಈ ಬಾರಿ ಬಜೆಟ್ ನಲ್ಲಿ ಮೈಸೂರು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹೇಳಿದರು.

Key words: Mysore – holistic- development -budget – – MUDA president- HV Rajeev.