ಮುಸ್ಲಿಂಮರನ್ನ  ಎದುರು ಹಾಕಿಕೊಳ್ಳಲು ಡಿಕೆಶಿ,ಹೆಚ್.ಡಿಕೆ ಸಿದ್ದುಗೆ ತಾಕತ್ತಿಲ್ಲ- ಸಚಿವ ಕೆ.ಎಸ್ ಈಶ್ವರಪ್ಪ.

ಕಾರವಾರ,ಏಪ್ರಿಲ್,4,2022(www.justkannada.in): ಮುಸ್ಲಿಂಮರನ್ನ  ಎದುರು ಹಾಕಿಕೊಳ್ಳಲು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಹೆಚ್.ಡಿ ಕುಮಾರಸ್ವಾಮಿಗೆ ತಾಕತ್ತಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಕಾರವಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಮುಸ್ಲಿಂಮರನ್ನ  ಎದುರು ಹಾಕಿಕೊಳ್ಳಲು ತಾಕತ್ತಿದ್ರೂ ಕಾಂಗ್ರೆಸ್ ಜೆಡಿಎಸ್ ಗೆ ವೋಟ್ ಕಳೆದುಕೊಳ್ಳಲು ತಯಾರಿಲ್ಲ.  ಹೆಚ್.ಡಿಕೆಗೆ  ಮುಸ್ಲಿಂ ವೋಟ್ ಕೈತಪ್ಪುವ ಭಯವಿದೆ. ಹೀಗಾಗಿ  ದಿನವಿಡಿ ಹೆಚ್.ಡಿ ಕೆ ಮಾತನಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಗೆ ಹಿಂದೂಗಳ ಒಂದೂ ಓಟ್ ಕಿತ್ತುಕೊಳ್ಳಲು ಆಗಲ್ಲ. ದೇಶದ್ರೋಹಿ ಮುಸ್ಲೀಮರಿಗೆ ಡಿಕೆಶಿ, ಸಿದ್ಧರಾಮಯ್ಯ ಬೆಂಬಲ ನೀಡುತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೈಕ್ ಹಾಕಿದ್ರೆ ಧರ್ಮಗಳ ನಡುವೆ ಸಂಘರ್ಷ ಉಂಟಾಗುತ್ತದೆ.  ಮಸೀದಿ ದೇಗುಲಗಳಲ್ಲಿ ಮೈಕ್ ಹಾಕಿದ್ರೆ ವಿದ್ಯಾರ್ಥಿಗಳು ವೃದ್ಧರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಮುಸ್ಲಿಂರೇ ಚಿಂತನೆ ಮಾಡಬೇಕು. ಮಸೀದಿಯೊಳಗೆ ಮೈಕ್ ಹಾಕಿದರೆ ಸೂಕ್ತ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

Keyw words: minister-KS Eshwarappa-dk shivakumar-HD kumaraswamy- siddaramaiah