ಸರ್ಕಾರಿ ಶಾಲೆಯಲ್ಲಿ ಹಾಲು ಕುಡಿದು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ…

ಮೈಸೂರು,ಫೆ,26,2020(www.justkannada.in):  ಸರ್ಕಾರಿ ಶಾಲೆಯಲ್ಲಿ ಹಾಕು ಕುಡಿದ ಬಳಿಕ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಕಿರಂಗೂರು ಸ.ಹಿ.ಪ್ರಾ.ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಮಕ್ಕಳಿಗೆ ಕೆನೆಭರಿತ ಹಾಲು ನೀಡಲಾಗಿತ್ತು. ಹಾಲು ಕುಡಿದ  20ಕ್ಕು ಹೆಚ್ಚು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳಿಗೆ ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಎಲ್ಲಾ ಮಕ್ಕಳೂ ಚೇತರಿಸಿಕೊಂಡಿದ್ದಾರೆ.

ಸ್ಥಳಕ್ಕೆ ಬಿಇಓ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಾಲೆ ಆರಂಭಕ್ಕೂ  ಮುನ್ನ ಇಬ್ಬರು ಮಕ್ಕಳು ಹೊರಗಡೆ ಮಾರುತ್ತಿದ್ದ ಬೇಲ ಹಾಗೂ ಹುಣಸೇ ಹಣ್ಣು ತಿಂದು ಹಾಲು ಕುಡಿದ ಕೂಡಲೇ ವಾಂತಿ ಮಾಡಿದ್ದಾರೆ. ಇದನ್ನು ನೋಡಿ ಮಿಕ್ಕ ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಹಾಲು ಪುಡಿಯಲ್ಲಿ ಯಾವುದೇ ಸಮಸ್ಯೆಯಿಲ್ಲ  ಎಂದು ಬಿಇಒ ನಾಗರಾಜ್ ಸ್ಪಷ್ಟನೆ ನೀಡಿದರು.

Key words: mysore– government school-20 students-drink- milk-Vomiting