ಮುಂದಿನ ತಿಂಗಳು ಹೊಯ್ಸಳೋತ್ಸವ ನಡೆಸಲು ನಿರ್ಧಾರ-ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ.

ಹಾಸನ,ನವೆಂಬರ್,24,2022(www.justkannada.in): ಮುಂದಿನ ತಿಂಗಳು ಹೊಯ್ಸಳೋತ್ಸವ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೇಲೂರು ಹಳೇಬೀಡಿನಲ್ಲಿ ಹೊಯ್ಸಳರು ಆಳ್ವಿಕೆ ನಡೆಸಿದ್ದರು. ಬೇಲೂರು ಹಳೇಬೀಡು ವಿಶ್ವ ವಿಖ್ಯಾತ ಪ್ರವಾಸಿ ತಾಣಗವಾಗಿವೆ. ಕೆಲವೇ ದಿನಗಳಲ್ಲಿ ಯುನೆಸ್ಕೋ ಮಾನ್ಯತೆ ಹೊಂದಿದ ತಾಣವಾಗಲಿವೆ ಎಂದರು.

Key words: Decision – Hoysala festival -next month-CM -Basavaraja Bommai.