ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ಅ.24 ರಂದು ರೈತರ ಸಂಘದಿಂದ ಪ್ರತಿಭಟನೆಗೆ ನಿರ್ಧಾರ….

ಮೈಸೂರು,ಅ,19,2019(www.justkannada.in):  ಮುಕ್ತ ವ್ಯಾಪಾರ ಒಪ್ಪಂದ ವಿರುದ್ಧ ಅಕ್ಟೋಬರ್ 24 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ದೇಶದಾದ್ಯಂತ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರದಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಹೇಳಿದರು.

ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೊಸಕೋಟೆ ಬಸವರಾಜು. 15 ರಾಷ್ಟ್ರಗಳು ಈ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿವೆ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ( ಆರ್ ಅಇ ಇಪಿ) ಒಪ್ಪಂದಕ್ಕೆ ಕೇಂದ್ರ ಸರ್ಕಾದ ಸಹಿ ಹಾಕಿದ್ದಲ್ಲಿ ಹೈನುಗಾರಿಕೆ ಮಾಡುವ 15 ಕೋಟಿ ಜನಕ್ಕೆ ತೊಂದರೆಯಾಗುತ್ತಿದೆ. ಹೊರ ದೇಶಗಳಿಂದ ಹಾಲು ಹಾಗು ಹಾಲಿನ ಉತ್ಪನ್ನನ್ನಗಳು ಲಂಗುಲಾಗಮಿಲ್ಲದೆ ಹರಿದುಬರುತ್ತವೆ. ಈ ಒಪ್ಪಂದ ರೈತರಿಗೆ ಕಂಟಕವಾಗಲಿದೆ ಎಂದು ಆರೋಪಿಸಿದರು.

ಹೊರ ದೇಶದವರು ಇದರಿಂದ ತೆರಿಗೆ ಮುಕ್ತವಾಗಿ  ವ್ಯಾಪರ ನಡೆಸಲಿವೆ. ಇದರಿಂದ ಭಾರದಲ್ಲಿ ಉತ್ಪತ್ತಿಯಾಗುವ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗಿದೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಈ ಒಪ್ಪಂದಕ್ಕೆ ಸಹಿ ಮಾಡಬಾರದು. ಹೀಗಾಗಿ ಎಲ್ಲ ಸಂಘಟನೆಗಳು ಒಟ್ಟುಗೂಡಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಎಲ್ಲಾ ಜಿಲ್ಲಾಕೇಂದ್ರಗಳ ಮುಂದೆ ದನ ಕರುಗಳ ಜೊತೆಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೊಸಕೋಟೆ ಬಸವಾರಾಜು  ಮಾಹಿತಿ ನೀಡಿದರು.

ಮೋದಿ ಅಧಿಕಾರಕ್ಕೆ ಬಂದ ನಂತರ ನಮ್ಮವರೈತರ ಹಿತ ಕಾಪಾಡುತ್ತಾರೆ. ನಮ್ಮ ರೈತರು ಬೆಳೆದವ ಉತ್ಪನ್ನಗಳನ್ನ ಹೊರ ದೇಶಕ್ಕೆ ಕಳುಹಿಸಿ ಆರ್ಥಿವಾಗಿ ರೈತರು ಸಬಲರಾಗುತ್ತಾರೆ ಎಂಬ ಆಶಾಭಾವನೆ ಇತ್ತು. ಆದ್ರೆ ಇಂದು ರೈತನ್ನ ಬೀದಿಗೆ ತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ರೈತ ಮುಖಂಡರು ಹೇಳಿಕೆ ನೀಡಿದ್ದಾರೆ.

Key words: mysore- Farmers- Association – protest –against- free trade agreement