ಕೇಂದ್ರ ಸರ್ಕಾರದಿಂದ ಎಂ.ಎಸ್.ಎಂ.ಇ. ಘಟಕಗಳಿಗೆ ನೆರವು ಘೋಷಣೆ: ಸ್ವಾಗತಿಸಿದ ಎಫ್.ಕೆ.ಸಿ.ಸಿ.ಐ.

ಬೆಂಗಳೂರು,ಜೂ,2,2020(www.justkannada.in):  ಜೂನ್ 1 ರಂದು ಅತೀ ಸಣ್ಣ, ಸಣ್ಣ ಮತ್ತು ಮದ್ಯಮ ಪ್ರಮಾಣದ ಉದ್ದಿಮೆಗಳಿಗೆ ಕೇಂದ್ರ ಸರ್ಕಾರವು ಘೋಷಿಸಿರುವ ನೆರವನ್ನು ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಸ್ವಾಗತಿಸುತ್ತದೆ ಎಫ್.ಕೆ.ಸಿ.ಸಿ.ಐ. ಸಂಸ್ಥೆ ಅಧ್ಯಕ್ಷ  ಸಿ ಆರ್ ಜನಾರ್ಧನ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿ ಆರ್ ಜನಾರ್ಧನ,  ಈ ನೆರವಿನಡಿಯಲ್ಲಿ ಎಂ.ಎಸ್.ಎಂ.ಇ. ಪರಿಭಾಷೆಯನ್ನು ಪರಿಷ್ಕರಿಸಿದ್ದು, ಇದರ ಆಧಾರದಲ್ಲಿ ಎಂ.ಎಸ್.ಎಂ.ಇ. ಪ್ಯಾಕೇಜಿನಲ್ಲಿ ಘೋಷಿಸಿರುವ ನೆರವು ಬಹಳಷ್ಟು ಸಣ್ಣ ಕೈಗಾರಿಕೆಗಳಿಗೆ ಲಭ್ಯವಾಗುತ್ತದೆ. ಈ ನಿರ್ಧಾರಗಳಿಂದ ಪ್ರಥಮ ಬಾರಿಗೆ ಎನ್.ಪಿ.ಎ. ಮಟ್ಟದಲ್ಲಿರುವ ಎಂ.ಎಸ್.ಎಂ.ಇ.ಗಳು ಈ ವ್ಯಾಪ್ತಿಯಿಂದ ಹೊರಬಂದು ಹೆಚ್ಚುವರಿ ಧನಸಹಾಯವನ್ನು ಪಡೆಯಲು ಅರ್ಹತೆ ಪಡೆಯುತ್ತವೆ.central-government-m-s-m-e-assistance-fkcci-welcomed

ಇದಲ್ಲದೇ, ಸಂಕಷ್ಟದಲ್ಲಿರುವ ಎಂ.ಎಸ್.ಎಂ.ಇ. ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆಗಾಗಿ ಸುಮಾರು ರೂ.20,000 ಕೋಟಿಗಳಷ್ಟು, ಅಧೀನ ಸಾಲ ಪಡೆಯಲು ಅವಕಾಶ ಕಲ್ಪಿಸಿದ್ದು, ಸುಮಾರು 2,00,000 ಸಂಕಷ್ಟದಲ್ಲಿರುವ ಘಟಕಗಳಿಗೆ ನೆರವಾಗಲಿದೆ. ಇದರ ಜೊತೆಗೆ ಎಂ.ಎಸ್.ಎಂ.ಇ. ಘಟಕಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ರೂ.50,000 ಕೋಟಿಗಳ ಫಂಡ್ ಆಫ್ ಪಂಡ್ಸ್ ಸ್ಥಾಪನೆ ಮಾಡುವುದರಿಂದ ಡೆಟ್ ಇಕ್ವಿಟಿ ಪ್ರಮಾಣವನ್ನು ಸರಿದೂಗಿಸುವಲ್ಲಿ ಸಹಾಯವಾಗುತ್ತದೆ ಎಂದು ಹೇಳಿದರು.

ಎಂ.ಎಸ್.ಎಂ.ಇ. ಮಂತ್ರಾಲಯವು ಚಾಂಪಿಯನ್ ವೆಬ್ ಸೈಟ್ ಪ್ರಾರಂಭಿಸಿದ್ದು, ಪ್ರತಿಯೊಂದು ಎಂ.ಎಸ್.ಎಂ.ಇ. ಡಿಐಗಳಲ್ಲಿ ಚಾಂಪಿಯನ್ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಇದರಿಂದ ಹಲವಾರು ಅತೀ ಸಣ್ಣ ಮತ್ತು ಸಣ್ಣ ಉದ್ದಿಮೆಗಳು ಚಾಂಪಿಯನ್ ಉದ್ದಿಮೆಗಳಾಗಿ ಮಾರ್ಪಾಡಾಗಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಘೋಷಿಸಿರುವ ಎಂ.ಎಸ್.ಎಂ.ಇ. ಪ್ಯಾಕೇಜುಗಳಿಂದ ಸದರಿ ಉದ್ದಿಮೆಗಳು ಮುಂದಿನ ದಿನಗಳಲ್ಲಿ ಶರವೇಗದಿಂದ ಅತ್ಯಂತ ಶಕ್ತಿಶಾಲಿಯಾಗಿ ಬೆಳೆಯುವ ಅವಕಾಶಗಳಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕ್ರಮಗಳಿಗೆ ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಕೇಂದ್ರ ಎಂ.ಎಸ್.ಎಂ.ಇ. ಸಚಿವರಾದ ನಿತಿನ್ ಗಡ್ಕರಿರವರಿಗೆ ಧನ್ಯವಾದಗಳನ್ನ  ಅರ್ಪಿಸುತ್ತದೆ ಎಂದು ಸಿ ಆರ್ ಜನಾರ್ಧನ ತಿಳಿಸಿದ್ದಾರೆ.

Key words: Central Government-  M.S.M.E. – Assistance-FKCCI- welcomed