Friday, September 18, 2026

BDA Apartments

ಮೃತ ಕೊರೋನಾ ವಾರಿಯರ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಬಿಡುಗಡೆ ಮಾಡಿದ ಸರ್ಕಾರ… B...
Home Front Page ಮೃತ ಕೊರೋನಾ ವಾರಿಯರ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಬಿಡುಗಡೆ ಮಾಡಿದ ಸರ್ಕಾರ…

ಮೃತ ಕೊರೋನಾ ವಾರಿಯರ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಬಿಡುಗಡೆ ಮಾಡಿದ ಸರ್ಕಾರ…

ಬೆಂಗಳೂರು,ಜೂ,2,2020(www.justkannada.in):  ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟ ಆಂಬ್ಯುಲೆನ್ಸ್ ಚಾಲಕ ಉಮೇಶ್ ಫಕೀರಪ್ಪ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ.

ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರು ನಿವಾಸಿ ಉಮೇಶ್ ಫಕೀರಪ್ಪ ಹಡಗಲಿ ಮೇ 27 ರಂದು ಕರ್ತವ್ಯದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದರು. ಈ ನಡುವೆ ಮೃತ ಉಮೇಶ್ ಫಕೀರಪ್ಪ ಅವರ ಪತ್ನಿ ತಾಳಿ ಮಾರಿ ತನ್ನ ಪತಿಯ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಉಮೇಶ್ ಫಕೀರಪ್ಪ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೊಳಗಾಗಿತ್ತು. Government –releases- 5 lakh -compensation - Corona Warrior -family.

ಈ ಬಗ್ಗೆ ವರದಿಯಾದ ಬೆನ್ನಲ್ಲೆ ಸಿಎಂ ಬಿಎಸ್ ಯಡಿಯೂರಪ್ಪ ಮೃತ ಉಮೇಶ್ ಫಕೀರಪ್ಪ ಅವರ ಪತ್ನಿಗೆ ದೂರವಾಣಿ ಕರೆ ಮಾಡಿ ಸಾಂತ್ವಾನ ಹೇಳಿ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯವನ್ನ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಮೃತ ಕೊರೋನಾ ವಾರಿಯರ್  ಉಮೇಶ್ ಫಕೀರಪ್ಪಗೆ ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ.

Key words: Government –releases- 5 lakh -compensation – Corona Warrior -family.