ಸಿದ್ದರಾಮಯ್ಯ ಹೊರತುಪಡಿಸಿದ್ರೆ ಡಾ.ಜಿ.ಪರಮೇಶ್ವರ್ ಸಿಎಂ ಆಗಲಿ- ಸಚಿವ ಕೆ.ಎನ್ ರಾಜಣ್ಣ.

ತುಮಕೂರು,ನವೆಂಬರ್,3,2023(www.justkannada.in): ರಾಜ್ಯದಲ್ಲಿ ಅಧಿಕಾರದ ಹಂಚಿಕೆ ವಿಚಾರ ಭಾರಿ ಚರ್ಚೆಯಾಗುತ್ತಿದ್ದು ಇದೀಗ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ಸಿಎಂ ಸಿದ್ಧರಾಮಯ್ಯ ಮತ್ತು ಗೃಹಸಚಿವ ಡಾ.ಜಿ.ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ.

ಇಂದು ತುಮಕೂರಿನಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ, ಸಿದ್ಧರಾಮಯ್ಯ ಹೊರತುಪಡಿಸಿದ್ರೆ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾ.ಜಿ. ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ. ಈಗ ಪರಮೇಶ್ವರ್  ಹೋಮ್ ಮಿನಿಸ್ಟರ್ ಆಗಿದ್ದಾರೆ. ಮುಂದೆ ಏನು ಬೇಕಾದರೂ ಆಗಬಹುದು.  ನಮ್ಮ ಜಿಲ್ಲೆಯಿಂದ ಒಬ್ಬ ಸಿಎಂ ಆದ್ರೆ ಸಂತೋಷ ಪಡುತ್ತೇವೆ ಸಿದ್ದರಾಮಯ್ಯ ಇರುವವರೆಗೂ ನಾವೆಲ್ಲಾ ಸಿದ್ದರಾಮಯ್ಯ ಪರ ಇರ್ತೇವೆ.  ನಾನು ಪರಮೇಶ್ವರ್ ಇಬ್ಬರೂ ಸಿಎಂ ಸಿದ್ದರಾಮಯ್ಯ ಪರ ಇರುತ್ತೇವೆ ಎಂದರು.

ಏನು ಮಾತನಾಡಬಾರದು ಎಂದು ಎಐಸಿಸಿನವರು ಹೇಳಿದ್ದಾರೆ. ಈಗ ಮಾತನಾಡಿದ್ದು ಆಯ್ತು ಮುಂದೆ ಮಾತನಾಡಲ್ಲ ಎಂದಿದ್ದೇವೆ ಎಂದು ಸಚಿವ ಕೆಎನ್ ರಾಜಣ್ಣ ತಿಳಿಸಿದರು.

Key words:  Siddaramaiah –  Dr. G. Parameshwar- will be – CM – Minister -K. N. Rajanna.