ದಲಿತ ಸಿಎಂ ವಿಚಾರ: ಕಾದು ನೋಡಿ ಎಂದ ಸಚಿವ ಕೆ.ಎಚ್ ಮುನಿಯಪ್ಪ.

ಹುಬ್ಬಳ್ಳಿ,ನವೆಂಬರ್,3,2023(www.justkannada.in): ಅಧಿಕಾರ ಹಂಚಿಕೆ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿದ್ದು ಐದು ವರ್ಷ ನಾನೇ ಸಿಎಂ ಎಂದು ಸಿದ್ಧರಾಮಯ್ಯ ಹೇಳಿಕೆ ಬೆನ್ನಲ್ಲೆ ಸಚಿವರು ಮತ್ತು ಕಾಂಗ್ರೆಸ್ ಮುಖಂಡರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಈ ಮಧ್ಯೆ ದಲಿತ ಸಿಎಂ ಕೂಗು ಕೂಡ ಕೇಳಿ ಬರುತ್ತಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ದಲಿತ ಸಿಎಂ ಬಗ್ಗೆ ಕಾದು ನೋಡಿ ಎಂದಿದ್ದಾರೆ.

ಒಬ್ಬರು ಸಿಎಂ ಇರುವಾಗ ನಾನು ಮಾತನಾಡಲು ಆಗಲ್ಲ. ಸಿಎಂ  ಸ್ಥಾನ ಖಾಲಿ ಇಲ್ಲ. ಸಮುದಾಯದ ಬೇಡಿಕೆ ಸಮಂಜಸವಾಗಿದೆ. ಸಿಎಂ ಸ್ಥಾನ ಖಾಲಿ ಇದ್ದಾಗ ಮಾತನಾಡಬಹುದು ಸದ್ಯ ಸಿಎಂ ಸಿದ್ಧರಾಮಯ್ಯ  ಡಿಸಿಎಂ ಡಿಕೆ ಶಿವಕುಮಾರ್ ಇದ್ದಾರೆ. ಎಲ್ಲವೂ ಹೈಕಮಾಂಡ್ ತೀರ್ಮಾನ  ಮಾಡಲಿದೆ ಎಂದು  ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.

Key words: Dalit CM –issue- Minister KH- Muniyappa -said -wait and see.