ಮೈಸೂರು ದಸರಾ: ಅ.13 ಅಥವಾ 14 ರಂದು ಜಂಬೂ ಸವಾರಿ ರಿಹರ್ಸಲ್.

ಮೈಸೂರು,ಅಕ್ಟೋಬರ್,9,2021(www.justkannada.in): ವಿಶ್ವವಿಖ್ಯಾತ  ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು ಅಕ್ಟೋಬರ್ 13 ಅಥವಾ 14 ರಂದು ಜಂಬೂ ಸವಾರಿ ರಿಹರ್ಸಲ್ ನಡೆಯಲಿದೆ.

ಮೈಸೂರು ದಸರಾ ಮಹೋತ್ಸವಕ್ಕೆ ಅಕ್ಟೋಬರ್ 7 ರಂದು ಚಾಲನೆ ನೀಡಲಾಗಿದ್ದು ಅಕ್ಟೋಬರ್ 15 ರಂದು ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯುವಿಗೆ ಪೂರ್ವಭಾವಿಯಾಗಿ ಅಕ್ಟೋಬರ್ 13 ಅಥವಾ 14ರಂದು‌ ಜಂಬೂಸವಾರಿ ರಿಹರ್ಸಲ್ ನಡೆಯಲಿದೆ.

ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ಅರಮನೆ ಮುಂಭಾಗ ಪುಷ್ಪಾರ್ಚನೆ‌ ಮಾಡಲಿದ್ದು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಈ ಜಂಬೂಸವಾರಿ ರಿಹರ್ಸಲ್‌ ನಡೆಯಲಿದೆ. ರಿಹರ್ಸಲ್‌ ನಲ್ಲಿ ಗಜಪಡೆ ಜೊತೆ ಅಶ್ವದಳವೂ ಭಾಗಿಯಾಗಲಿದೆ.

Key words: Mysore Dasara-Jumbo ride -rehearsal – Oct. 13 or 14