ದಸರಾ ಗಜಪಡೆಯ ಮಾವುತ, ಕಾವಾಡಿಗಳ ಮನವೊಲಿಸಿ ಕೊರೋನಾ ಟೆಸ್ಟ್: ವರದಿ ಬಂದ ಬಳಿಕ ಮುಂದಿನ ತಾಲೀಮಿನ ಬಗ್ಗೆ ನಿರ್ಧಾರ..

Promotion

ಮೈಸೂರು,ಅಕ್ಟೋಬರ್,3,2020(www.justkannada.in):  ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿ ಜಿಲ್ಲಾ ಅರೋಗ್ಯ ಅಧಿಕಾರಿ ಡಾ ವೆಂಕಟೇಶ್ ಅವರ ಜತೆ ವಾಗ್ವಾದಕ್ಕಿಳಿದಿದ್ದ ಮೈಸೂರು ದಸರಾ ಗಜಪಡೆ ಆನೆಗಳ ಮಾವುತರು ಕಾವಾಡಿಗಳ  ಮನವೊಲಿಸಿ ಕೋವಿಡ್ ಟೆಸ್ಟ್ ಮಾಡಲಾಗಿದೆ.jk-logo-justkannada-logo

ಕೊರೋನಾ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಅರಮನೆಯಲ್ಲಿ ದಸರಾ ಆನೆಗಳ ಜತೆ ಬೀಡುಬಿಟ್ಟಿರುವ ಮಾವುತರು, ಕಾವಾಡಿಗಳಿಗೆ ಇಂದು ಕೊರೋನಾ ಟೆಸ್ಟ್ ಗೆ ನಿರ್ಧರಿಸಲಾಗಿತ್ತು. ಆದರೆ ನಾವು ಕಾಡಿನ ಜನ ನಮಗೆ ಯಾವ ರೋಗ ಇಲ್ಲ. ನಾವು ಯಾವುದೇ ಕಾರಣಕ್ಕೂ ಟೆಸ್ಟ್ ಮಾಡಿಸಲ್ಲ ಎಂದು ಮಾವುತ, ಕಾವಾಡಿಗಳು ಕೋವಿಡ್ ಟೆಸ್ಟ್ ಗೆ ನಿರಾಕರಿಸಿದ್ದರು.

ಇದೀಗ ಮಾವುತರು, ಕಾವಾಡಿಗಳ ಮನವೊಲಿಸುವಲ್ಲಿ ಡಿಸಿಎಫ್ ಯಶಸ್ವಿಯಾಗಿದ್ದು, 5 ಆನೆಗಳ ಮಾವುತ, ಕಾವಾಡಿ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಟೆಸ್ಟ್ ಮಾಡಲಾಯಿತು. 15ಕ್ಕೂ ಹೆಚ್ಚು ಮಾವುತ ಕಾವಾಡಿಗಳು ಆ್ಯಂಟಿಜನ್ ರ್ಯಾಪಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ಇಂದು ಸಂಜೆಯೊಳಗೆ ಮಾವುತ ಕಾವಾಡಿಗಳ ಕೊರೋನಾ ಟೆಸ್ಟ್ ರಿಸಲ್ಟ್ ಬರಲಿದೆ. ಹೀಗಾಗಿ ಕೊರೋನಾ ಪರೀಕ್ಷೆ ವರದಿ ಬಂದ ನಂತರವಷ್ಟೇ ಮುಂದಿನ ತಾಲೀಮಿನ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಆನೆ ಅರಮನೆಗೆ ಬಂದಮೇಲೆ ದಸರಾ ಮುಗಿಯುವವರೆಗೂ ಹೊರಗಡೆ ಹೋಗಲ್ಲ. ಆನೆಗಳಿಗೆ ಕೊರೊನಾ ಟೆಸ್ಟ್ ಸದ್ಯಕ್ಕೆ ಮಾಡಿಸಲ್ಲ. ಆನೆ ಗಳಿಗೆ ಅನಾರೋಗ್ಯ ಕಂಡುಬಂದರೆ ಮಾತ್ರ ಟೆಸ್ಟ್ ಮಾಡಿಸುತ್ತೇವೆ. ಆನೆಗಳಿಗೆ ಟೆಸ್ಟ್ ಮಾಡಿಸುವ ಕಿಟ್ ಗಳಿಲ್ಲ. ಅದಕ್ಕೂ ಬೇಡಿಕೆ ಇಟ್ಟಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Key words: mysore-dasara-corona test –mavutha-kavadi-gajapade