ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸುಮನ್ ರಂಗನಾಥ್

ಬೆಂಗಳೂರು, ಜೂನ್ 06, 2019 (www.justkannada.in): ನಟಿ ಸುಮನ್ ರಂಗನಾಥ್ ಅವರು ಉದ್ಯಮಿ ಸಜನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೂಲತಃ ಕೊಡನಗಿನವರಾದ ಸಜನ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಬೋಜ್ ಪುರಿ ಹೀಗೆ ಬಹುಭಾಷೆಗಳಲ್ಲಿ ಸಿನಿಮಾಗಳಲ್ಲಿ ಮಿಂಚಿರುವ ಸುಮನ್ ರಂಗನಾಥ್ ಅವರು ಈ ಹಿಂದೆ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಹೇಳದೆ ಸದ್ಯ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೆಜ್ ಆಗಿದ್ದಾರೆ.

ಸುಮನ್ ರಂಗನಾಥ್, 8 ತಿಂಗಳ ಹಿಂದೆ ನಮ್ಮಿಬ್ಬರ ಪರಿಚಯವಾಗಿತ್ತು. ಕೆಲವು ಭೇಟಿ ನಂತರ ಸ್ನೇಹ ಬೆಳೆಯಿತು. ಸ್ನೇಹ ಪ್ರೀತಿಯಾಗಿ ಈಗ ವಿವಾಹ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದು ಸುಮನಾ ಸಂತಸ ಹಂಚಿಕೊಂಡಿದ್ದಾರೆ.